More

    ಆತಂಕದ ನಡುವೆಯೂ ಸಂಭ್ರಮ

    ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲೂಕುಗಳಲ್ಲಿ ಶಾಲಾ ಆರಂಭೋತ್ಸವದ ದಿನವಾದ ಸೋಮವಾರ ಶೇ. 66ರಷ್ಟು ವಿದ್ಯಾರ್ಥಿ ಗಳು ಶಾಲೆಗಳಿಗೆ ಹಾಜರಾಗಿದ್ದರು.

    ಶೈಕ್ಷಣಿಕ ಜಿಲ್ಲೆಯ 175 ಪ್ರೌಢಶಾಲೆಗಳ 22,170 ವಿದ್ಯಾರ್ಥಿಗಳಲ್ಲಿ 14,595 ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಆಗಮಿಸಿದ್ದರು. 9ನೇ ತರಗತಿಯ 6682, 10ನೇ ತರಗತಿಯ 7913 ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. ವರ್ಷಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಕರೊನಾ ಆತಂಕದ ನಡುವೆಯೂ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಶಾಲೆಗಳು ತೆರೆದಿದ್ದವು.

    ಸುರಕ್ಷತೆಗೆ ಆದ್ಯತೆ: ಶಾಲಾರಂಭಕ್ಕೆ ಮುಂಜಾಗ್ರತೆಯಾಗಿ ಇಡೀ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯವಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳಲು ಪೂರಕವಾಗಿ ಬೆಂಚ್, ಡೆಸ್ಕ್ ಜೋಡಿಸಲಾಗಿತ್ತು.

    ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅನುಮತಿ ಪತ್ರ ಇಲ್ಲದೆ ಇದ್ದರೆ, ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇಲ್ಲ. ಹಾಗಾಗಿ ಪಾಲಕರ ಒಪ್ಪಿಗೆ ಪತ್ರವನ್ನು ತರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ತಂದಿದ್ದರು. ಪಾಲಕರ ಮನಸಲ್ಲಿರುವ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ಅವುಗಳನ್ನು ಪಾಲಕರ ವಾಟ್ಸ್ ಆಪ್​ಗೆ ಕಳುಹಿಸಲಾಯಿತು.

    ಕೇವಲ ಭೌತಿಕ ತರಗತಿಗಳು ಅಲ್ಲದೆ, ಯಥಾಪ್ರಕಾರ ಆನ್​ಲೈನ್ ತರಗತಿಗಳೂ ನಡೆಯುತ್ತವೆ. ಆನ್​ಲೈನ್, ಆಫ್​ಲೈನ್ ಎರಡರಲ್ಲೂ ತರಗತಿ ನಡೆಸಲಾಗುತ್ತದೆ. 50:50 ಅನುಪಾತದಲ್ಲಿ ಭೌತಿಕ ತರಗತಿ ಮಾಡಲಾಗುತ್ತದೆ. ಬ್ಯಾಚ್ ಆಧಾರದಲ್ಲಿ ಮೊದಲ ಮೂರು ದಿನ ಭೌತಿಕ ತರಗತಿ, ನಂತರ ಮೂರು ದಿನ ಆನ್​ಲೈನ್ ತರಗತಿ ನಡೆಯಲಿದೆ.

    | ದಿವಾಕರ ಶೆಟ್ಟಿ, ಡಿಡಿಪಿಐ ಶಿರಸಿ

    ತೋರಣ ಕಟ್ಟಿ ಸ್ವಾಗತಿಸಿದ ಶಿಕ್ಷಕರು: ಕಾರವಾರ: ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರ ಜಿಲ್ಲೆಯ ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜ್​ಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾಗಿವೆ. ಮೊದಲ ದಿನ ಕಾರವಾರ ಶೈಕ್ಷಣಿಕ ಜಿಲ್ಲೆಯ ಹೈಸ್ಕೂಲ್​ಗಳಲ್ಲಿ ಶೇ. 74ರಷ್ಟು, ಜಿಲ್ಲೆಯ ಪದವಿಪೂರ್ವ ಕಾಲೇಜ್​ಗಳಲ್ಲಿ ಶೇ. 60ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಪಾಠ ಕೇಳಿದರು. ಕಾರವಾರದ ಅಮದಳ್ಳಿ ಸೇರಿ ವಿವಿಧ ಹೈಸ್ಕೂಲ್​ಗಳ ಎದುರು ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ನಗರದ ಸರ್ಕಾರಿ ಹೈಸ್ಕೂಲ್​ನಲ್ಲಿ ಹೂವು, ನೋಟ್​ಬುಕ್, ಪಾಠೋಪಕರಣ ಹಾಗೂ ಮಾಸ್ಕ್ ನೀಡಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದರು. ಎಲ್ಲ ಶಾಲೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ತರಗತಿ ಪ್ರಾರಂಭಕ್ಕೂ ಪೂರ್ವದಲ್ಲಿ ಕೋವಿಡ್ ನಿಯಮ ಪಾಲನೆ ಬಗ್ಗೆ ಸೂಚನೆಗಳನ್ನು ನೀಡಲಾಯಿತು.

    ತೆರೆಯದ ವಸತಿ ಶಾಲೆಗಳು: ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ದೇಸಾಯಿ ಮುಂತಾದ ವಸತಿ ಶಾಲೆಗಳು ಹಾಸ್ಟೆಗಳನ್ನು ತೆರೆಯಲಾಗಿಲ್ಲ. ಅಲ್ಲಿ ಓದುತ್ತಿರುವ ವದ್ಯಾರ್ಥಿಗಳು ತಮ್ಮ ಸಮೀಪದ ಹೈಸ್ಕೂಲ್​ಗಳಿಗೆ ತೆರಳಿ ಪಾಠ ಕೇಳಬಹುದು ಎಂದು ಸರ್ಕಾರ ಸೂಚನೆ ನೀಡಿದೆಯಾದರೂ ಅದಿನ್ನೂ ಜಾರಿಯಾಗಿಲ್ಲ. ಬುಕ್ ಬ್ಯಾಂಕ್ ಮಾಡಿಕೊಂಡಿದ್ದರಿಂದ ಅದರಿಂದ ಸಮಸ್ಯೆ ಎಲ್ಲೂ ಉದ್ಭವಿಸಿಲ್ಲ ಎಂದು ಡಿಡಿಪಿಐ ಹರೀಶ ಗಾಂವಕರ್ ತಿಳಿಸಿದ್ದಾರೆ.

    ಶಾಲೆ-ಕಾಲೇಜ್​ಗೆ ಕಾರ್ವಿುಕ ಸಚಿವ ಭೇಟಿ: ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ಶಾಲೆ ಕಾಲೇಜ್​ಗಳು ಆರಂಭವಾಗಿದ್ದು, ಪಟ್ಟಣದ ಶಾಲೆ-ಕಾಲೇಜ್​ಗೆ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.ಕಾಳಮ್ಮನಗರ ಸರ್ಕಾರಿ ಪ್ರೌಢಶಾಲೆ ಹಾಗೂ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್​ಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಧೈರ್ಯ ತುಂಬಿದರು. ಕರೊನಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವುದರೊಂದಿಗೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಮಿತ ಅಂಗಡಿ, ಪ್ರಮುಖರಾದ ಶಿರೀಷ ಪ್ರಭು, ಗಣಪತಿ ಮುದ್ದೆಪಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts