More

    ಪರೀಕ್ಷೆ ರದ್ದಾಗಿದ್ದರೂ ಶುಲ್ಕ ಕಟ್ಬೇಕು! ; ಫೀಸ್ ಪಾವತಿಸಲು ನೂಕುನುಗ್ಗಲು ; ವಿವಿ ಕಾಲೇಜಿನಲ್ಲಿ ಜನಜಾತ್ರೆ ; ಕರೊನಾ ಮಾರ್ಗಸೂಚಿಗೆ ಗುಡ್‌ಬೈ

    ತುಮಕೂರು ; ಕರೊನಾ ಹಿನ್ನೆಲೆಯಲ್ಲಿ 2 ಹಾಗೂ 4ನೇ ಪರೀಕ್ಷೆ ರದ್ದಾಗಿದ್ದರೂ ಪದವಿ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ವಸೂಲಿ ಮಾಡುತ್ತಿರುವ ತುಮಕೂರು ವಿವಿ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಪರೀಕ್ಷೆ ರದ್ದಾಗಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿ ಪ್ರಿಂಟಿಂಗ್‌ಗೆ ತಗುಲುವ ವೆಚ್ಚವನ್ನಷ್ಟೇ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂಬ ಆಗ್ರಹ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಪರೀಕ್ಷೆ ಶುಲ್ಕ ಪಾವತಿಗೆ ಮುಗಿಬಿದ್ದ ವಿದ್ಯಾರ್ಥಿಗಳು ಕರೊನಾ ಮಾರ್ಗಸೂಚಿ ಪಾಲಿಸುತ್ತಿಲ್ಲ. ಗುರುವಾರ ಸಾವಿರಾರು ವಿದ್ಯಾರ್ಥಿಗಳು ಒಮ್ಮೆಲೆ ಮುಗಿಬಿದ್ದಿದ್ದರಿಂದ ಜನಜಾತ್ರೆಯೇ ನಿರ್ಮಾಣವಾಗಿತ್ತು. ಪರೀಕ್ಷೆ ಇಲ್ಲದಿದ್ದರೂ ಶುಲ್ಕ ಪಡೆಯುತ್ತಿರುವ ಬಗ್ಗೆ ವಿವಿ ಆಡಳಿತ ಮಂಡಳಿ ವಿಮರ್ಶೆ ನಡೆಸಬೇಕಿದೆ.

    ಆ.16ರವರೆಗೂ ಪರೀಕ್ಷಾ ಶುಲ್ಕ ಕಟ್ಟಲು ಅವಕಾಶ ನೀಡಿದ್ದರೂ ವಿದ್ಯಾರ್ಥಿಗಳೆಲ್ಲಾ ಒಮ್ಮೆಲೇ ನುಗ್ಗಿದ್ದಾರೆ, ಕಾಲೇಜು ಆಡಳಿತ ಮಂಡಳಿ ಕೂಡ ಒಂದೇ ಕೌಂಟರ್ ವ್ಯವಸ್ಥೆ ಮಾಡಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಕೂಡಲೇ ಎಚ್ಚೆತ್ತುಕೊಂಡ ತುಮಕೂರು ವಿವಿ ವಿದ್ಯಾರ್ಥಿಗಳನ್ನು ಚದುರಿಸಿ ಮುಂಜಾಗ್ರತಾ ಕ್ರಮಕೈಗೊಂಡಿತು.

    ಕರೊನಾದಿಂದ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದು ವಿವಿ ಲಾಭ, ನಷ್ಟದ ಲೆಕ್ಕಾಚಾರ ಮಾಡಿಕೊಳ್ಳದೆ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂಬ ಒತ್ತಾಯ ಕೂಡ ಕೇಳಿಬಂದಿದೆ.

    ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳುವಾಗ ಕರೊನಾ ಮಾರ್ಗಸೂಚಿ ಪಾಲಿಸದ ವಿವಿ ಕಲಾ ಕಾಲೇಜು ಪ್ರಾಚಾರ್ಯರಿಗೆ ನೋಟಿಸ್ ನೀಡಲಾಗಿದೆ, ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ್ದೇನೆ. ವಿದ್ಯಾರ್ಥಿಗಳು ಕರೊನಾ ಮಾರ್ಗಸೂಚಿ ಪಾಲಿಸಬೇಕು.
    ಪ್ರೊ.ವೈ.ಎಸ್.ಸಿದ್ದೇಗೌಡ ಕುಲಪತಿ, ತುಮಕೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts