More

    ‘ಬರಗಾಲದಲ್ಲಿ ಒಂದು ಚೊಂಬು ಕುಡಿಯೋ ನೀರು ಕೊಡೊಕೆ ಯೋಗ್ಯತೆ ಇಲ್ಲದ ಕಾಂಗ್ರೆಸ್ಸಿಗರು’

    ತುಮಕೂರು: ಬರಗಾಲದಲ್ಲಿ ಜನರಿಗೆ ಒಂದು ಚೊಂಬು ಕುಡಿಯುವ ನೀರು ನೀಡುವ ಯೋಗ್ಯತೆಯಿಲ್ಲದ ಕಾಂಗ್ರೆಸ್ಸಿಗರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಲು ಬೊಂಬಿನ ಜಾಹೀರಾತು ನೀಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿರುಗೇಟು ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣಭಾಗದ ಮನೆ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ನೀಡುತ್ತಿದೆ. ಅನ್ನಭಾಗ್ಯ ಯೋಜನೆ ನೀಡಿ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಿದ್ದೇವೆ ಎಂದು ಭಾಷಣ ಬಿಗಿಯುವ ಸಿಎಂ ಸಿದ್ದರಾಮಯ್ಯ, ಒಂದು ಕೆಜಿಯಷ್ಟೂ ಅಕ್ಕಿ ಕೊಡುತ್ತಿಲ್ಲ. ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಮೋದಿ ಸರ್ಕಾರದ ಕೊಡುಗೆ. ಅಕ್ಕಿ ಮೋದಿಯವರದ್ದು, ಚೀಲ ಸಿದ್ದರಾಮಯ್ಯ ಅವರದ್ದು ಎಂದು ಹರಿಹಾಯ್ದರು.

    ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಶನಿವಾರ ನಗರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆ, ಮನೆಮನೆ ತೆರಳಿ ಪ್ರಚಾರ ನಡೆಸಿದ ಅರವಿಂದ ಲಿಂಬಾವಳಿ, ಈ ದೇಶದ ಅಭಿವೃದ್ಧಿ, ಶಾಂತಿ, ಸಮೃದ್ಧಿ, ಸರ್ವಜನರ ರಕ್ಷಣೆಗೆ ಮೋದಿ ಅನಿವಾರ್ಯವಾಗಿದ್ದಾರೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದರು.

    ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಓಂಕಾರ್, ನಿವೃತ್ತ ಸರ್ಕಲ್ ಇನ್ಸ್‌ಪೆಕ್ಟರ್ ಮುನಿರಾಜು, ಗ್ರಾಪಂ ಅಧ್ಯಕ್ಷರಾದ ಗಂಗಮ್ಮ ಆನಂದಕುಮಾರ್, ಧನಲಕ್ಷ್ಮಿ ನಟರಾಜು, ಮುಖಂಡರಾದ ಶಿವಕುಮಾರ್, ಆಶಾ ತ್ರಿಲೋಚನ್, ಮಂಜುನಾಥ್, ವಿಶ್ವನಾಥ್, ಜಯಚಂದ್ರಪ್ಪ, ಪುರುಷೋತ್ತಮ್, ಮುನೇಶ್, ಕೃಷ್ಣಮೂರ್ತಿ, ರಂಗಸ್ವಾಮಿ, ಚಂದ್ರಣ್ಣ, ವೆಂಕಟೇಶ್ ಮತ್ತಿತರರು ಹಾಜರಿದ್ದರು.

    ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿಯ ಬರ್ಬರ ಹತ್ಯೆ ಅಮಾನವೀಯ. ಹಿಂದುಗಳಿಗೆ ಈ ರಾಷ್ಟ್ರ ಬಿಟ್ಟರೆ ಬೇರೆ ಜಾಗ ಇಲ್ಲ. ದೇಶದ ಜನರ ರಕ್ಷಣೆಗೆ, ಗೌರವವಾಗಿ ಬಾಳಲು ಮೋದಿಯವರು ಇರಲೇಬೇಕು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತುಮಕೂರಿನಲ್ಲಿ ವಿ.ಸೋಮಣ್ಣರನ್ನು ಗೆಲ್ಲಿಸಬೇಕು.
    ಜಿ.ಬಿ.ಜ್ಯೋತಿಗಣೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts