More

    ಇವಿಎಂಗಳ ಮೊದಲ ಹಂತದ ತಪಾಸಣೆ ಆರಂಭ

    ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೈದರಾಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ದಿಂದ ಜಿಲ್ಲೆಗೆ ಪೂರೈಕೆಯಾಗಿರುವ ಕಂಟ್ರೋಲ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್‌ಗಳ ಮೊದಲ ಹಂತದ ತಪಾಸಣೆ ಸೋಮವಾರ ಆರಂಭವಾಯಿತು.

    ಕುಂಚಿಗನಾಳ್‌ನಲ್ಲಿ ಈಚೆಗೆ ನಿರ್ಮಾಣವಾದ ಇವಿಎಂ ಗೋದಾಮಿನ ನೂತನ ಕಟ್ಟಡದಲ್ಲಿ, ಹೈದರಬಾದಿನ ಇಸಿಐಎಲ್‌ನಿಂದ ಬಂದಿರುವ 17 ಇಂಜಿನಿಯರ್‌ಗಳ ತಂಡ ತಪಾಸಣೆ ಆರಂಭಿಸಿದೆ.

    ಚಿತ್ರದುರ್ಗಕ್ಕೆ ಕಳೆದ ನವೆಂಬರ್ 15ರಂದು 2190 ಕಂಟ್ರೋಲ್ ಹಾಗೂ 3119 ಬ್ಯಾಲೆಟ್ ಯೂನಿಟ್‌ಗಳು ಪೂರೈಕೆಯಾಗಿದ್ದವು. ಈ ಮೊದಲು ಇವುಗಳನ್ನು ಗುರುಭವನದಲ್ಲಿ ಇಡಲಾಗಿತ್ತು. ನವೆಂಬರ್ 18ರಂದು ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಗಳು ಅಕ್ಸೆಪ್ಟೆನ್ಸಿ ಟೆಸ್ಟ್ ನಡೆಸಿದ್ದರು. ಇಸಿಐಎಲ್‌ನಿಂದ ಜ.12ರಂದು ಜಿಲ್ಲೆಗೆ 2365 ಸುಧಾರಿತ ವಿವಿಪ್ಯಾಟ್‌ಗಳು ಪೂರೈಕೆಯಾಗಿದ್ದವು.

    ಸುಧಾರಿತ ಕಂಟ್ರೋಲ್, ಬ್ಯಾಲೆಟ್ ಯೂನಿಟ್‌ಗಳು, ವಿವಿ ಪ್ಯಾಟ್‌ಗಳನ್ನು ಮುಂಬರುವ ಚುನಾವಣೆಯಲ್ಲಿ ಮೊದಲ ಬಾರಿಗೆ ಬಳಸಲಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಜಿಆರ್‌ಜೆ ದಿವ್ಯಾಪ್ರಭು, ಎಡಿಸಿ ಇ.ಬಾಲಕೃಷ್ಣ, ಇವಿಎಂ ನೋಡಲ್ ಅಧಿಕಾರಿ ಶಿವರಾಜ್ ಆರ್.ಕುಲಕರ್ಣಿ, ಚುನಾವಣಾ ವಿಭಾಗದ ತಹಸೀಲ್ದಾರ್ ಸಂತೋಷ್, ಮಲ್ಲಿಕಾರ್ಜುನ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

    *ಕೋಟ್
    ಸೋಮವಾರ ಆರಂಭವಾಗಿರುವ ಮತಯಂತ್ರಗಳ ಮೊದಲ ಹಂತದ ತಪಾಸಣೆ ಕಾರ್ಯ 12-15 ದಿನಗಳ ಕಾಲ ನಡೆಯಲಿದೆ. ಹೈದರಾಬಾದ್ ಇಸಿಐಎಲ್ ತಜ್ಞರ ತಂಡ ಪಾಲ್ಗೊಂಡಿದ್ದು, ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿ, ಸಿಬ್ಬಂದಿ ಎಫ್‌ಎಲ್‌ಸಿಗೆ ನೆರವಾಗಿದ್ದೇವೆ.
    ಜಿಆರ್‌ಜೆ ದಿವ್ಯಾಪ್ರಭು
    ಡಿಸಿ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts