More

    ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!

    ಹಾಸನ: ಉತ್ತರ ಪ್ರದೇಶದ ರಾಮಮಂದಿರ ಉದ್ಘಾಟನೆ, ರಾಮ ಮೂರ್ತಿ ಪ್ರತಿಷ್ಠಾನದಂತಹ ಬೃಹತ್ ಧರ್ಮಕಾರ್ಯ ಸಂಧರ್ಭದಲ್ಲೇ ಹಾಸನದಲ್ಲೊಂದು ಗ್ರಾಮದಲ್ಲಿ ನೂರಾರು ವರುಷಗಳ ಪುರಾತನ ರಾಮ ಪಾದುಕೆ ಗೋಚರವಾಗಿವೆ. ಗ್ರಾಮಸ್ಥರು ಈ ಪಾದುಕೆ ರಚನೆ ನೋಡಿ ಜೊತೆಗೆ ಇನ್ನಿತರ ಆಕೃತಿಗಳನ್ನ ನೋಡಿ ಸಂತಸ ವ್ಯಕ್ತಪಡಿಸಿ, ಪೂಜೆಯನ್ನೂ ಆರಂಭಿಸಿದ್ದಾರೆ.

    ಆಲೂರು ತಾಲ್ಲೂಕಿನ ಕಾಗನೂರು ಗ್ರಾಮದ ಹೇಮಾವತಿ ಹಿನ್ನೀರಿನ ತಟದಲ್ಲಿನ ಕಲ್ಲು ಬಂಡೆಯಲ್ಲಿ ರಾಮ ಪಾದುಕೆಗಳು ಗೋಚರವಾಗಿವೆ. ಹಿಂದೆ ಈ ಕಲ್ಲನ್ನ ಗ್ರಾಮಸ್ಥರು ಪಾದಾರೆ ಕಲ್ಲು ಅಂತಾನೆ ಕರಿತಿದ್ದದ್ದು ವಾಡಿಕೆ. ಆದರೆ ಈ ಪಾದುಕೆ ರಚನೆ ಜೊತೆ ಶಿವಲಿಂಗ, ಪಗಡೆಯಾಟದ ಚೌಕ್ ಮನೆ, ಹನುಮಂತನ ಗದೆ ಆಕೃತಿ ಈ ಎಲ್ಲವೂ ಬಂಡೆಯ ಮೇಲೆ ಗುರುತು ಸಿಕ್ಕಿದೆ. ಗ್ರಾಮಸ್ಥರು ಈ ಪಾದಾರೆ ಕಲ್ಲನ್ನ ಬಗೆದು ಸ್ವಚ್ಚ ಮಾಡಿದಾಗ ಈ ರಚನೆಗಳು ಸ್ಪಷ್ಟವಾಗಿ ಕಾಣಸಿಕ್ಕಿವೆ.

    ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!

    ಹೇಮಾವತಿ ಹಿನ್ನೀರ ದಂಡೆಯಲ್ಲಿ ಈ ಕಲ್ಲಿನ ಬಂಡೆ ಇದ್ದು ಮಳೆಗಾಲದಲ್ಲಿ ಈ ಜಾಗವೇ ಸಂಪೂರ್ಣ ಮುಳುಗಿ ಹೋಗುತ್ತೆ. ಹೀಗಾಗಿ ಈ ಅಪೂರ್ವ ಕಲ್ಲಿನ ಬಗ್ಗೆ ಗಮನ ಇರಲಿಲ್ಲ. ವಿಶೇಷ ಅಂದ್ರೆ ಈ ಪಾದುಕೆ ಬಳಿಯೇ ಹಳೆ ಭಾಷೆಯಲ್ಲಿ ಕೆತ್ತನೆ ಇದ್ದು, ಜೈ ಶ್ರೀರಾಮ ಎಂದು ಬರೆದಿದ್ದಾರೆ ಅಂದು ಇಲ್ಲಿಗೆ ಆಗಮಿಸಿದ್ದ ಪಕ್ಕದ ಹಳ್ಳಿ ಇತಿಹಾಸ ತಜ್ಞರು ಹೇಳಿದ್ದಾರೆಂದು ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಕಾಗನೂರು ಗ್ರಾಮದಲ್ಲಿ ಬೃಹತ್ ಹನುಮಂತನ ವಿಗ್ರಹವೂ ಇದೆ. ಹೀಗಾಗಿ ಈ ಪುರಾತನ ಕಲ್ಲಿನ ಮೇಲೆ ಗೋಚರವಾಗುವ ಪಾದಗಳು ರಾಮಾಯಣ ಕಾಲದ್ದು ಜೊತೆಗೆ ರಾಮ ಲಕ್ಷ್ಮಣ ಪಗಡೆಯಾಡಿ ಇಲ್ಲಿ ಕಾಲ ಕಳೆದು ಹೋಗಿದ್ದಾರೆಂದು ಕಥೆಯೂ ಇವೆ. ಆದರೆ ರಾಮಮಂದಿರ ನಿರ್ಮಾಣ ಸುಕೃತಗೊಳ್ಳೋ ಸಮಯದಲ್ಲಿ ಈ ರೀತಿ ರಾಮನ ಪಾದುಕೆ ಕಂಡ ಸ್ಥಳದಲ್ಲಿ ಸರ್ಕಾರ ,ರಾಜಕೀಯ ನಾಯಕರು ಈ ಜಾಗವನ್ನ ಇನ್ನಷ್ಟು ಅಭಿವೃದ್ಧಿ ಮಾಡಿದರೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

    ‘ಕಾಟೇರ’ ರಿಲೀಸ್​: ಅಂಬಾರಿ ಹೊತ್ತ ಅರ್ಜುನನಿಗೆ ವಿಶೇಷ ನಮನ ಸಲ್ಲಿಸಿದ ಚಿತ್ರತಂಡ! ಅರ್ಪಿಸಿದ ಸಾಲುಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts