More

    ಪ್ರತಿಯೊಬ್ಬರೂ ಪ್ರಕೃತಿ ಪ್ರೀತಿಸಿ : ಸಂಗನಬಸವ ಶಿವಾಚಾರ್ಯರ ಹೇಳಿಕೆ

    ವಿಜಯಪುರ: ಭಗವಂತನು ನೀಡಿದ ಪ್ರಕೃತಿಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕೆಂದು ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

    ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಮೌನ ಸಂಗಮನಾಥನ ಜಾತ್ರೆ ಹಾಗೂ ಅರ್ಚಕ ಕಾಶಿನಾಥ ಬನಸಿಯವರ 50ನೇ ಜನ್ಮದಿನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮರವು ಬಿಸಿಲಲ್ಲಿ ನಿಂತು ಜನತೆಗೆ ನೆರಳು ನೀಡುತ್ತದೆ. ಆಕಳು ತನ್ನ ಹಾಲನ್ನು ತಾನೇ ಕುಡಿಯುವುದಿಲ್ಲ. ಮೇವು ತಿಂದು ಹಾಲು ಕೊಡುತ್ತದೆ. ಹಾಗೇ ಪ್ರತಿಯೊಬ್ಬರೂ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಕೆಲಸ ಮಾಡಿದರೆ ಮಾತ್ರ ಭಗವಂತ ಆಶೀರ್ವದಿಸುತ್ತಾನೆ ಎಂದರು.

    ಕಾಖಂಡಕಿ ಗುರುದೇವ ಆಶ್ರಮದ ಸಂದೀಪ ಮಹೋದಯ ಮಾತನಾಡಿ, ಶ್ರಾವಣ ಮಾಸದಲ್ಲಿ ಶರಣರ, ಸಂತರ ಮತ್ತು ಅನೇಕ ಪೂಜ್ಯರ ನೇತೃತ್ವದಲ್ಲಿ ಭಕ್ತರು ಶರಣರ ನುಡಿಗಳನ್ನು ಆಲಿಸಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪುನೀತರಾಗಬೇಕೆಂದು ತಿಳಿಸಿದರು.

    ಸಿದ್ಧರಾಮಯ್ಯ ಹಿರೇಮಠ, ರಾಮನಗೌಡ ಪಾಟೀಲ, ರಾಜುಗೌಡ ಪಾಟೀಲ, ಪರಶುರಾಮ ಸಿಂಗರಜಪೂತ, ಬಿ. ಎನ್. ಪಾಟೀಲ, ನಾರಾಯಣ ಘೋರ್ಪಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts