More

  ಅಖಾಡಕ್ಕೆ ಘಟಾನುಘಟಿಗಳು: ಗಡ್ಕರಿ, ಅಣ್ಣಾಮಲೈ ಮತ್ತಿತರರಿಂದ ನಾಮಪತ್ರ ಸಲ್ಲಿಕೆ

  ನವದೆಹಲಿ: ಮೊದಲನೇ ಹಂತದಲ್ಲಿ ದೇಶದ 21 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಲ್ಲಿ ಏ. 19ರಂದು ನಡೆಯಲಿರುವ ಲೋಕಸಭಾ ಚುನಾವಣೆ ಸಂಬಂಧ ಬುಧವಾರ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದು, ಪ್ರಕ್ರಿಯೆ ನಿರ್ಣಾಯಕ ಘಟ್ಟಕ್ಕೆ ಏರಿದೆ.

  ಬಿಹಾರ ಹೊರತು ಪಡಿಸಿ ಉಳಿದ 20 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಲೋಕಸಭಾ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಬುಧವಾರ ಕಡೇದಿನವಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಮುಂತಾದವರು ಅಬ್ಬರದಲ್ಲಿ ಉಮೇದುವಾರಿಕೆ ಸಲ್ಲಿಸಿ ಗಮನ ಸೆಳೆದರು. ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ಮಾ.28 ಕಡೇದಿನವಾಗಿದೆ. ಮಹಾರಾಷ್ಟ್ರದ ನಾಗ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಅವರು ಡಿಸಿಎಂ ದೇವೇಂದ್ರ ಫಡ್ನವಿಸ್, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಂಕುಲೆ ಮುಂತಾದವರ ಜತೆ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿ ಅವರ ನೇತೃತ್ವದಲ್ಲಿ ಭಾರತವನ್ನು ವಿಶ್ವಗುರು ಆಗಿಸಬೇಕು ಎಂದರು.

  ಅಖಾಡಕ್ಕೆ ಘಟಾನುಘಟಿಗಳು: ಗಡ್ಕರಿ, ಅಣ್ಣಾಮಲೈ ಮತ್ತಿತರರಿಂದ ನಾಮಪತ್ರ ಸಲ್ಲಿಕೆ

  ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಅಣ್ಣಾಮಲೈ, ಚೆನ್ನೈ ಕೇಂದ್ರ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ದಯಾನಿಧಿ ಮಾರನ್, ನೀಲ್​ಗಿರೀಸ್ ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಎ. ರಾಜಾ, ಥೇಣಿ ಕ್ಷೇತ್ರದ ಎಎಂಎಂಕೆ ಅಭ್ಯರ್ಥಿ ಟಿಟಿವಿ ದಿನಕರನ್ ಕೂಡ ಬುಧವಾರ ನಾಮಪತ್ರ ಸಲ್ಲಿಸಿದರು. ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳಲ್ಲಿ 993 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

  ಬಿಹಾರದಲ್ಲಿ ಮಾ.30ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಳಿದ 20 ರಾಜ್ಯಗಳಲ್ಲಿ ಮಾ.28ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಬಿಹಾರದಲ್ಲಿ ಏ.2 ಹಾಗೂ ಉಳಿದ 20 ರಾಜ್ಯಗಳಲ್ಲಿ ಮಾ.30 ಕಡೇದಿನವಾಗಿದೆ.

  ವರುಣ್ ಗಾಂಧಿ ಅನುಪಸ್ಥಿತಿ: ಉತ್ತರಪ್ರದೇಶದಲ್ಲಿ ಬಿಜೆಪಿಯ ವರುಣ್ ಗಾಂಧಿ ಸಂಸದರಾಗಿರುವ ಪಿಲಿಭಿತ್ ಕ್ಷೇತ್ರಕ್ಕೆ ಇತ್ತೀಚೆಗೆ ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರಿದ್ದ ಜಿತಿನ್ ಪ್ರಸಾದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರಕ್ಕೆ ಮತ್ತೆ ಆಕಾಂಕ್ಷಿ ಆಗಿದ್ದ ವರುಣ್ ಗಾಂಧಿಗೆ ಟಿಕೆಟ್ ಕೈತಪ್ಪಿದ್ದು, ಜಿತಿನ್ ನಾಮಪತ್ರ ಸಲ್ಲಿಕೆ ಸಂದರ್ಭ ವರುಣ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು.

  ಕಂಗನಾ-ಮಮತಾಗೆ ಅಪಮಾನ: ಇಬ್ಬರಿಗೆ ಆಯೋಗದ ನೋಟಿಸ್

  ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಹಾಗೂ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರಿಗೆ ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ‘ಅವಹೇಳನಕಾರಿ ಹೇಳಿಕೆ ನೀಡಿರುವ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು?’ ಎಂದು ಕೇಳಿರುವ ಆಯೋಗ, ಶುಕ್ರವಾರ ಸಂಜೆ 5ರ ಒಳಗೆ ನೋಟಿಸ್​ಗೆ

  ಉತ್ತರಿಸುವಂತೆ ತಾಕೀತು ಮಾಡಿದೆ. ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ವಿರುದ್ಧ ಅವಹೇಳನಕಾರಿ ಆಗಿ ಮಾತನಾಡಿದ್ದಕ್ಕೆ ಸುಪ್ರಿಯಾ ಶ್ರೀನೇತ್ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಪಮಾನ ಕಾರಿ ಆಗಿ ಮಾತನಾಡಿದ್ದಕ್ಕೆ ದಿಲೀಪ್ ಘೋಷ್ ಅವರಿಗೆ ಆಯೋಗ ಈ ನೋಟಿಸ್ ಜಾರಿ ಮಾಡಿದೆ.

  ಕೇರಳ ಸಿಎಂ ಪುತ್ರಿ ವೀಣಾ ವಿರುದ್ಧವೂ ಇ.ಡಿ. ತನಿಖೆ

  ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರಿಗೂ ಜಾರಿ ನಿರ್ದೇಶನಾಲಯದ ಬಿಸಿ ತಟ್ಟಿದೆ. ವೀಣಾ ಹಾಗೂ ಅವರ ಬೆಂಗಳೂರು ಮೂಲದ ಐಟಿ ಕಂಪನಿ ಎಕ್ಸಲಾಜಿಕ್ ಸಲ್ಯೂಷನ್ಸ್ ಗೆ ಕೊಚಿನ್ ಮಿನರಲ್ಸ್ ಆಂಡ್ ಮೆಟಲ್ಸ್ ಲಿ. ಕಂಪನಿಯಿಂದ 1.72 ಕೋಟಿ ರೂ. ಬಂದಿದೆ ಎಂಬ ಹಿನ್ನೆಲೆಯಲ್ಲಿ ಇ.ಡಿ. ತನಿಖೆ ಕೈಗೊಂಡಿದೆ. ಕೇರಳ ಕರಾವಳಿ ತೀರದ ಅಲಪು್ಪಳ ಮತ್ತು ಕೊಲ್ಲಂ ಪ್ರದೇಶದಲ್ಲಿ ಖನಿಜಯುಕ್ತ ಮರಳು ಗಣಿಗಾರಿಕೆ ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ಹಣ ಸಂದಾಯವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಪೋರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಗಂಭೀರ ವಂಚನೆ ತನಿಖಾ ಕಚೇರಿ ಈ ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಸುತ್ತಿದೆ. ‘ಬಿಜೆಪಿ ಏಜೆನ್ಸಿ ಥರ ಇ.ಡಿ.ಕಾರ್ಯನಿರ್ವಹಿಸುತ್ತಿದೆ’ ಎಂದು ಸಿಪಿಐ(ಎಂ) ಇ.ಡಿ. ತನಿಖೆ ಸಂಬಂಧ ಪ್ರತಿಕ್ರಿಯೆ ನೀಡಿದ್ದರೆ, ‘ಕೇರಳದಲ್ಲಿನ ಸಿಪಿಐ-ಬಿಜೆಪಿ ನಂಟು ಮುಚ್ಚಿಡಲು ಈ ತಂತ್ರ’ ಎಂದು ಕಾಂಗ್ರೆಸ್ ಆರೋಪಿಸಿದೆ.

  ಮಥುರಾದಿಂದ ಯೋಗಿ ಆದಿತ್ಯನಾಥ ಚುನಾವಣಾ ಕಹಳೆ: ಪವಿತ್ರ ನಗರವಾದ ಮಥುರಾದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿ, 500 ವರ್ಷಗಳ ನಂತರ ಭಗವಾನ್ ರಾಮನು ಅಯೋಧ್ಯೆಯಲ್ಲಿನ ತನ್ನ ಧಾಮದಲ್ಲಿ ಹೋಳಿ ಆಡಿದನು. ಈಗ ಮಥುರಾ ಮತ್ತು ವೃಂದಾವನ ಕೂಡ ಇದೇ ಪಥದಲ್ಲಿ ಸಾಗಿದೆ ಎಂದರು. ವಿರೋಧ ಪಕ್ಷಗಳು ಭ್ರಷ್ಟಾಚಾರ ಮತ್ತು ಮಾಫಿಯಾ ಆಡಳಿತವನ್ನು ಪೋ›ತ್ಸಾಹಿಸುತ್ತಿವೆ. ತುಷ್ಟೀಕರಣದ ರಾಜಕಾರಣದ ಮೂಲಕ ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಬಯಸುತ್ತಿವೆ. ಈ ಚುನಾವಣಾ ಕಾಲದಲ್ಲಿ ಎರಡು ಪಕ್ಷ ಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದರು.

  ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts