More

    ಘಟಕ ನಿರ್ವಿುಸಿದ್ದರೂ ನೀರಿನ ಮೂಲವೇ ಇಲ್ಲ:ಹೊರಗಡೆಯಿಂದ ನೀರು ತುಂಬಿಸಿ ಉದ್ಘಾಟನೆ ಮಾಡಿಸಿದ್ದ ನಗರಸಭೆ

    ರಾಮನಗರ: ನಿರ್ಮಾಣ ಮಾಡಿ ವರ್ಷವೇ ಕಳೆದಿದೆ, ಶಾಸಕರೂ ಉದ್ಘಾಟನೆ ಮಾಡಿದ್ದಾರೆ. ಆದರೆ ಯಾವ ಉದ್ದೇಶಕ್ಕೆ ಬಳಕೆ ಆಗಬೇಕಿತ್ತೋ ಆ ಉದ್ದೇಶ ಈಡೇರಿಸುವಲ್ಲಿ ನಗರಸಭೆ ವಿಫಲವಾಗಿದೆ.

    ರಾಮನಗರದ 26ನೇ ವಾರ್ಡ್​ನ ಗೀತಾ ಮಂದಿರ ಬಡಾವಣೆಯಲ್ಲಿ ವರ್ಷದ ಹಿಂದೆ ಎಸ್​ಎಫ್​ಸಿ ವಿಶೇಷ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ನೀರಿನ ಘಟಕ ನಿರ್ವಿುಲಾಗಿದೆ. ಕಳೆದ ವಾರ ರಾಮನಗರ ಪ್ರವಾಸ ಕೈಗೊಂಡಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಘಟಕ ಉದ್ಘಾಟಿಸಿದ್ದಾರೆ. ಆದರೆ ಘಟಕದಿಂದ ಸಾರ್ವಜನಿಕರು ಒಂದೇ ಒಂದು ಕ್ಯಾನ್ ನೀರು ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ.

    ನೀರಿನ ಮೂಲವೇ ಇಲ್ಲ: ಘಟಕ ನಿರ್ವಿುಸಿದ್ದರೂ ಇದಕ್ಕೆ ನೀರಿನ ಮೂಲವೇ ಇಲ್ಲ. ನೀರಿಗಾಗಿ ಎರಡು ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಬಾರದ ಹಿನ್ನೆಲೆಯಲ್ಲಿ ಘಟಕಕ್ಕೆ ಪರ್ಯಾಯ ಮಾರ್ಗದ ಮೂಲಕ ನೀರು ತರಬೇಕಿದೆ. ಇಲ್ಲವಾದರೆ ಘಟಕ ನಿರ್ವಣವೇ ನಿರುಪಯುಕ್ತವಾಗಲಿದೆ. ಶಾಸಕಿ ಅನಿತಾ ಕುಮಾರಸ್ವಾಮಿ ಬಂದಾಗ ಬುದ್ಧಿವಂತಿಕೆ ಪ್ರದರ್ಶಿಸಿದ ನಗರಸಭೆ ಮತ್ತು ಸ್ಥಳೀಯ ಮುಖಂಡರು ಟ್ಯಾಂಕ್​ಗೆ ಹೊರಗಡೆಯಿಂದ ನೀರು ತುಂಬಿಸಿ, ಅನಿತಾ ಅವರ ಮುಂದೆ ಜನ ನೀರು ತುಂಬಿಸಿಕೊಂಡು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಇವರ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಕೂಡಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.

    ಇದು ನನ್ನ ಗಮನಕ್ಕೆ ಬಂದಿಲ್ಲ. ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಬೇಕಾಗಿರುವುದು ನನ್ನ ಜವಾಬ್ದಾರಿ. ಘಟಕಕ್ಕೆ ಪರ್ಯಾಯ ಮಾರ್ಗದ ಮೂಲಕ ನೀರು ತಂದು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು.

    | ಬಿ.ನಂದಕುಮಾರ್, ಪೌರಾಯುಕ್ತ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts