More

    ಹೆಚ್ಚಿತು ಎತ್ತಿನಹೊಳೆ ವೇಗ

    ತುಮಕೂರು: ಬಯಲುಸೀಮೆಯ ಕುಡಿಯುವ ನೀರಿನ ದಾಹ ತೀರಿಸುವ ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದರಿಂದ ಯೋಜನೆಗೆ ವೇಗ ಸಿಗಲಿದೆ. ಕಲ್ಪತರು ನಾಡಿಗೆ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಹೊರತುಪಡಿಸಿ ಪ್ರಮುಖ ಕೊಡುಗೆಗಳನ್ನು ನೀಡಿಲ್ಲ. ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಜಿಲ್ಲೆಯ ಜನರ ಪಾಲಿಗೆ ಈ ಬಜೆಟ್ ನಿರಾಸೆ ತಂದಿದೆ.

    ಅನ್ನದಾತನಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು. ಆದರೆ, ಈ ಬಾರಿ ಜಿಲ್ಲೆಗೆ ನಿರ್ದಿಷ್ಟ ಯೋಜನೆಗಳನ್ನು ಘೋಷಿಸದೆ ಇರುವುದು ತೃಪ್ತಿದಾಯಕವೆನಿಸಿದೆ.
    ತೆಂಗು ಆಧಾರಿತಾ ಕೈಗಾರಿಕಾ ಪಾರ್ಕ್: ಜಿಲ್ಲೆಯ ಬಹುದಿನಗಳ ಬೇಡಿಕೆಗೆ ಬಿಎಸ್‌ವೈ ಸ್ಪಂದಿಸಿದ್ದಾರೆ. ತೆಂಗು ಆಧಾರಿತಾ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿರುವುದು ತೆಂಗು ಬೆಳೆಗಾರರಲ್ಲಿ ಸಾಕಷ್ಟು ಕನಸುಗಳನ್ನು ಮೂಡಿಸಿದೆ. ಅದೇ ರೀತಿ ಕಾಯರ್ ಎಕ್ಸ್‌ಪಿರಿಯೆನ್ಸ್ ಸೆಂಟರ್ ಸ್ಥಾಪನೆಗೆ 5 ಕೋಟಿ ರೂ., ಮೀಸಲಿಡಲಾಗಿದೆ. ಈ ಕೇಂದ್ರ ಎಲ್ಲಿ ಸ್ಥಾಪನೆ ಆಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ತೆಂಗು ಬೆಳೆಗಾರರ ಪಾಲಿಗೆ ಸ್ವಲ್ಪಮಟ್ಟಿನ ಖುಷಿಗೆ ಕಾರಣವಾಗಿದೆ.

    ತುಮಕೂರು ಸೇರಿ7 ಜಿಲ್ಲೆಗಳಿಗೆ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರಗಳಿಗೆ 353 ರೂ. ಕೋಟಿ ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ ಸ್ಥಾಪಿಸುವ ಮೂಲಕ ಕೈಗಾರಿಕಾ ಉದ್ಯಮ ಕ್ಷೇತ್ರಗಳ ಉನ್ನತ ಮಟ್ಟದ ಡೊಮೈನ್‌ಗಳಲ್ಲಿ ಕೌಶಲ್ಯ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಯುವ ಜನತೆಗೆ ಉದ್ಯೋಗಾವಕಾಶಕ್ಕೆ ಮುನ್ನುಡಿ ಎನಿಸಿದೆ. ಅತಿದೊಡ್ಡ ವಸಂತನರಸಾಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ನಿರ್ದಿಷ್ಟ ಒತ್ತು ನೀಡಿಲ್ಲ.

    ಪೆಟ್ರೋಲ್, ಡೀಸೆಲ್ ಸುಂಕ: ಪೆಟ್ರೋಲ್, ಡೀಸೆಲ್ ಸೆಸ್ ವಿಧಿಸಿರುವುದು ನೇರವಾಗಿ ಎಲ್ಲ ವರ್ಗದ ಜನರಿಗೂ ಬಿಸಿ ತಟ್ಟಲಿದೆ. ಇದರಿಂದ ಬಡ, ಮಧ್ಯಮ ವರ್ಗದವರಿಗೆ ಬೆಲೆ ಏರಿಕೆ ಕಾಡಲಿದೆ.
    ವಿಮಾನ ನಿಲ್ದಾಣಕ್ಕೆ ಜಾಗ ಕೊಡುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೇಮೆ ನಾಲೆ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ. ವಿವಿ ಹೊಸ ಕ್ಯಾಂಪಸ್‌ಗೆ ಅನುದಾನಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಬಗ್ಗೆಯೂ ಚಕಾರವೆತ್ತಿಲ್ಲ. ಜಿಲ್ಲೆಗೆ ಹೊಸ ಕೊಡುಗೆಗಳನ್ನು ಈ ಬಾರಿ ನೀಡದೆ ಇರುವುದು ನಿರಾಶಾದಾಯಕವೆನಿಸಿದೆ.

    ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಗಳಲ್ಲಿ ಅಲ್ಪಸಂಖ್ಯಾತರು ವಾಸಿಸುವ ಕಾಲನಿಗಳಿಗೆ 200 ಕೋಟಿ ರೂಪಾಯಿ ಈ ಬಜೆಟ್‌ನಲ್ಲಿ ಮೀಸಲಿಟ್ಟಿರುವುದು ರಾಜ್ಯದ ಬಿಜೆಪಿ ಸರ್ಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಹಬಾಳು ಎಂಬ ತತ್ವ ಸಿದ್ಧಾಂತದ ಮೇಲೆ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಳೆಯ ಯೋಜನೆಗಳನ್ನು ಮುಂದುವರೆಸಿಕೊಂಡು ಹೊಸ ಯೋಜನೆಗಳಿಗೆ ಒತ್ತು ನೀಡಿರುವ ಜನಪರ ಬಜೆಟ್ ಇದು.
    ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ

    ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳವಾಗಿರುವುದರಿಂದ ಎಲ್ಲ ಸಾಮಗ್ರಿಗಳ ಬೆಲೆ ಹೆಚ್ಚಳವಾಗಲಿವೆ. ಬಡ, ಮಧ್ಯಮವರ್ಗದವರಿಗೆ ಬದುಕು ಇನ್ನೂ ಹೊರೆಯಾಗಲಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ತುಮಕೂರು ನಗರಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳಿಲ್ಲ. ಇದೊಂದು ನಿರಾಶದಾಯಕ ಬಜೆಟ್.
    ಡಾ.ಎಸ್.ರಫೀಕ್ ಅಹ್ಮದ್ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts