More

    ಕುಮಾರ ಪ್ರಭು ಶ್ರೀ ಆದರ್ಶ ಮೈಗೂಡಿಸಿಕೊಳ್ಳಿ

    ಸೊರಬ: ಭಾವ-ಬದುಕು ಒಂದಾಗಿ ಎಲ್ಲರ ಮನೆಯ ಗುರುಗಳಾಗಿ ಬದುಕಿದವರು ಲಿಂ. ಕುಮಾರ ಪ್ರಭು ಸ್ವಾಮೀಜಿ ಎಂದು ಬಂಕಾಪುರದ ಸದಾಶಿವ ಪೇಟೆಯ ಶ್ರೀ ಗದಿಗೇಶ್ವರ ಸ್ವಾಮೀಜಿ ಹೇಳಿದರು.

    ಜಡೆ ಸಂಸ್ಥಾನ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಕುಮಾರ ಪ್ರಭು ಸ್ವಾಮೀಜಿಯ 22ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಮಲೆನಾಡಿನಲ್ಲಿ ಆಚಾರ ಹಾಗೂ ಅನುಷ್ಠಾನಕ್ಕೆ ಪ್ರಾಮುಖ್ಯತೆ ನೀಡಿದ್ದ ಶ್ರೀಗಳು ಸರಳ, ಸಹಜತೆ ಹಾಗೂ ಸದ್ಗುಣ ಮೈಗೂಡಿಸಿಕೊಂಡಿದ್ದರು ಎಂದು ಬಣ್ಣಿಸಿದರು.

    ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಕುಮಾರ ಪ್ರಭು ಸ್ವಾಮೀಜಿ ಮಾತೃಹೃದಯ ಹೊಂದಿದ್ದರು. ಅವರ ವ್ಯಕ್ತಿತ್ವ, ಆದರ್ಶಗಳನ್ನು ಪಾಲಿಸಬೇಕಿದೆ. ಆಚರಣೆ, ಪೂಜೆ, ಸದ್ವಿಚಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸರಳವಾಗಿ ಬದುಕಿದ ಅವರು ಭಕ್ತ ಸಮುದಾಯಲ್ಲಿ ನೆಲೆಸಿದ್ದಾರೆ ಎಂದರು.

    ಹಾರ್ನಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮದ ಬದುಕಿನಿಂದ ಸಾರ್ಥಕತೆ ಸಿಗುತ್ತದೆ. ಹಿಂದಿನ ಪೂಜ್ಯರ ಶಕ್ತಿ ಹಾಗೂ ಇಂದಿನ ಡಾ. ಮಹಾಂತ ಸ್ವಾಮೀಜಿ ಅವರ ಕ್ರಿಯಾಶೀಲತೆ ಜಡೆ ಸಂಸ್ಥಾನ ಮಠವನ್ನು ವಿಕಾಸಗೊಳಿಸುತ್ತಿದೆ ಎಂದು ತಿಳಿಸಿದರು.

    ನಿವೃತ್ತ ಪ್ರಾಚಾರ್ಯ ಜೈಶೀಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ಗೌಡ ಆಲಳ್ಳಿ, ಬಸವರಾಜ್ ಚೌಟಿ, ಪುಟ್ಟಯ್ಯ ಇದ್ದರು. ಪಾರ್ವತಮ್ಮ ಹಾಗೂ ಗೌರಮ್ಮ ಪ್ರಾರ್ಥಿಸಿದರು. ನಾಗರಾಜ್ ಗೌಡ ನಿರೂಪಿಸಿದರು. ಸಿ.ವಿ.ಶೆಟ್ಟಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts