More

    ಐಐಎಸ್ಸಿಯಲ್ಲಿ ನರವಿಜ್ಞಾನ ಸಂಶೋಧನೆಗೆ ಲ್ಯಾಬ್ ಸ್ಥಾಪನೆ

    ಬೆಂಗಳೂರು: ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆ ಕೈಗೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್‌ನಲ್ಲಿ ಹೊಸ ಪ್ರಯೋಗಾಲಯವನ್ನು ಬುಧವಾರ ಉದ್ಘಾಟಿಸಲಾಯಿತು.

    ಐಐಎಸ್ಸಿಯ ಸೂಪರ್ ಕಂಪ್ಯೂಟರ್ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ಸಿಡಿಎಸ್ ವಿಭಾಗದಲ್ಲಿ ಸೀಮನ್ಸ್ ಹೆಲ್ತ್‌ನೀರ್ಸ್‌ ಕಂಪನಿ ಸಹಯೋಗದಲ್ಲಿ ಲ್ಯಾಬ್‌ಗೆ ಸಿದ್ಧಗೊಂಡಿದೆ. ಈ ಲ್ಯಾಬ್‌ನಲ್ಲಿ ಕ್ಯಾನ್ಸರ್, ನರರಕ್ತನಾಳ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ಹಾಗೂ ಸಂಶೋಧನೆ ನಡೆಯಲಿದೆ. ಇದಕ್ಕಾಗಿ ಐಐಎಸ್ಸಿಯ 6 ವಿದ್ಯಾರ್ಥಿನಿಯರು ಸೇರಿ ಒಟ್ಟು 20 ಮಂದಿಗೆ ಫೆಲೋ ನೀಡಲಾಗುತ್ತದೆ. ಐದು ವರ್ಷದ ಅವಧಿಗೆ ನಡೆಯುವ ಈ ಸಂಶೋಧನೆಯಿಂದ ಹೊರಬರುವ ಲಿತಾಂಶವನ್ನು ವಿಶ್ಲೇಷಿಸಿ ಮನುಕುಲಕ್ಕೆ ಉಚಿತವಾಗಿ ಬಳಸಿಕೊಳ್ಳಲಾಗುತ್ತದೆ.

    ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮನ್ಸ್ ಹೆಲ್ತ್‌ನೀರ್ಸ್‌ ಅಭಿವೃದ್ಧಿ ಕೇಂದ್ರದ ಕಾರ್ಯನಿವಾರ್ಹಕ ನಿರ್ದೇಶಕ ದಿಲೀಪ್ ಮಂಗ್ಸುಲಿ, ಪ್ರಯೋಗಾಲಯ ಸ್ಥಾಪನೆ ಹಾಗೂ ಸಂಶೋಧನೆಗೆ ಕಂಪನಿಯಿಂದ ಒಂದು ಕೋಟಿ ರೂ. ಹಣವನ್ನು ಸಿಎಸ್‌ಆರ್ ನಿಧಿಯಿಂದ ನೀಡಲಾಗುತ್ತಿದೆ. ೆಲೋ ಪಡೆಯುವ ಪಿಎಚ್‌ಡಿ ವಿದ್ಯಾರ್ಥಿಗಳನ್ನು 3-4 ತಿಂಗಳಲ್ಲಿ ಆಯ್ಕೆ ಮಾಡಿ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

    ಎಐ ಪರಿಣಿತರ ಕೊರತೆ:

    ಭಾರತ ಸೇರಿ ವಿಶ್ವದೆಲ್ಲೆಡೆ ಇತ್ತೀಚಿಗೆ ದೊಡ್ಡ ಸಂಖ್ಯೆಯಲ್ಲಿ ರೋಗಿಗಳಿಗೆ ನರರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುವಿಕೆಯಿಂದ ಸಮಸ್ಯೆಯಾಗುತ್ತಿದೆ. ರೋಗಮೂಲ ಪತ್ತೆ ಹಚ್ಚಲು ಹೆಚ್ಚು ಸಮಯ ಹಾಗೂ ಹಲವು ಹಂತಗಳಲ್ಲಿ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಈ ವಿಳಂಬ ತಪ್ಪಿಸಲು ಎಐ ತಂತ್ರಜ್ಞಾನ ಬಳಸಿಕೊಂಡಲ್ಲಿ ರೋಗನಿರ್ಣಯವನ್ನು ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಆದರೆ, ಎಐ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯ ಪರಿಣಿತರು ಇಲ್ಲ. 2030ರ ವೇಳೆಗೆ ಪ್ರಪಂಚದಾದ್ಯಂತ 10 ಲಕ್ಷ ಎಐ ಪರಿಣಿತ ವೈದ್ಯರ ಕೊರತೆ ಕಾಡಬಹುದು. ಈ ಸಮಸ್ಯೆ ನಿವಾರಿಸಲೆಂದೇ ಕೃತಕಬುದ್ಧಿಮತ್ತೆಯನ್ನು ಮುನ್ನೆಲೆಗೆ ತರಲು ಸೀಮನ್ಸ್ ಹೆಲ್ತ್‌ನೀರ್ಸ್‌ ಮುಂದಡಿ ಇಟ್ಟಿದೆ ಎಂದು ತಿಳಿಸಿದರು.

    ನೂತನ ಪ್ರಯೋಗಾಲಯವು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಎಐ ಬಳಸಿಕೊಳ್ಳುವುದರಿಂದ ನಿಖರ ಪರಿಹಾರ ಪಡೆಯಲು ನಿರ್ಣಾಯಕ ಹೆಜ್ಜೆಯನ್ನು ಇಟ್ಟಂತಾಗಿದೆ. ಐಐಎಸ್ಸಿ-ಸೀಮನ್ಸ್ ಹೆಲ್ತ್‌ನೀರ್ಸ್‌ ಒಟ್ಟಾಗಿ ಆರೋಗ್ಯ ಕ್ಷೇತ್ರದ ಭವಿಷ್ಯಕ್ಕೆ ಬೇಕಾದ ಅಗತ್ಯತೆಯನ್ನು ವೇಗಗೊಳಿಸಲು ಇಚ್ಛಿಸಿದ್ದೇವೆ. ಈ ಸಹಯೋಗವು ಸಂಕೀರ್ಣ ಸವಾಲುಗಳನ್ನು ನಿಭಾಯಿಸಲು ಉದ್ಯಮ ಮತ್ತು ಅಕಾಡೆಮಿಕ್ ವಿಭಾಗವು ಹೇಗೆ ಪರಸ್ಪರ ಹತ್ತಿರವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.
    – ಪ್ರೊ. ಗೋವಿಂದನ್ ರಂಗರಾಜನ್, ಐಐಎಸ್ಸಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts