More

    ಅಂಬೇಡ್ಕರ್ ಹೋರಾಟದಿಂದಾಗಿ ಮಹಿಳೆಯರಿಗೆ ಸಮಾನತೆ: ಕಸಾಪ ಕೋಶಾಧ್ಯಕ್ಷ ನಂಜೇಗೌಡ ಅಭಿಮತ

    ರಾಮನಗರ: ಡಾ. ಬಿ.ಆರ್. ಅಂಬೇಡ್ಕರ್ ಅವರು ನಿರಂತರ ಹೋರಾಟದ ಮೂಲಕ ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದು, ಅದರ ಸದುಪಯೋಗ ಪಡೆದುಕೊಂಡು ಪ್ರಜ್ಞಾವಂತರಾದಾಗ ಮಾತ್ರ ಸಮಾಜದಲ್ಲಿನ ತಾರತಮ್ಯ ತೊಡೆದುಹಾಕಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಎಚ್.ಪಿ.ನಂಜೇಗೌಡ ಅಭಿಪ್ರಾಯಪಟ್ಟರು.

    ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಮನಗರ ವತಿಯಿಂದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಓದು ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಆಶು ಭಾಷಣ ಸ್ಪರ್ಧೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಮಹಿಳೆ ಪುರುಷನಷ್ಟೇ ಸಬಲರಾಗಲು ಸಂವಿಧಾನದಲ್ಲಿ ಹಲವು ಯೋಜನೆಗಳನ್ನು ಅಳವಡಿಸಿದ್ದು, ಇದರಿಂದ ಇಂದು ಮಹಿಳೆಯರೂ ಪುರುಷನಷ್ಟೇ ಸಂಭಾವನೆ ಪಡೆಯಲು ಸಾಧ್ಯವಾಗಿದೆ ಎಂದರು.

    ಪ್ರಾಧ್ಯಾಪಕ ಕಾಂತಪ್ಪ ಕೆ.ಸಿ ಮಾತನಾಡಿ, ರಾಜಕೀಯ ನೇತಾರರಾಗಿ, ಕ್ರೀಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಇತಿಹಾಸಕಾರರಾಗಿ, ಮಹಾ ದಾರ್ಶನಿಕರಾಗಿ, ಅಪ್ರತಿಮ ಚಿಂತಕರಾಗಿ, ಕ್ರಾಂತಿಕಾರಿಯಾಗಿ, ಸಮೃದ್ಧ ಬರಹಗಾರರಾಗಿ, ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರ್ ಅವರು ಮಾಡಿರುವ ಸಾಧನೆಗಳನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಪ್ರಪಂಚ ಇಂದು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದೆ ಎಂದರೆ ಅದು ಅಂಬೇಡ್ಕರ್ ಕುರಿತಾಗೇ ಆಗಿರುತ್ತದೆ ಎಂದರು.

    ಅಂಬೇಡ್ಕರ್ ಅವರ ತತ್ವ, ಸಿದ್ದಾಂತ, ಸಮಾಜಮುಖಿ ಚಿಂತನೆ, ಆದರ್ಶಗಳನ್ನು ಯುವ ಸಮುದಾಯದ ಮೈಗೂಡಿಸಿಕೊಳ್ಳಲು ಅಂಬೇಡ್ಕರ್ ಓದು ಅಭಿಯಾನವನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ವಿನಯ್ ಕುಮಾರ್ ತಿಳಿಸಿದರು.

    ಪ್ರಾಂಶುಪಾಲ ಪೊ›. ಮುದ್ದೀರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಒಂದು ಜಾತಿ ಜನಾಂಗಕ್ಕೆ ಸೀಮಿತರಾದವರಲ್ಲ. ಎಲ್ಲ ವರ್ಗ ಜಾತಿಗಳಿಗೂ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದರಿಂದ ಜನರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

    ಆಶುಭಾಷಣ ಸ್ಪರ್ಧೆ ವಿಜೇತರು

    ಅಂಬೇಡ್ಕರ್ ಓದು ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಆಶು ಭಾಷಣ ಸ್ಪರ್ಧೆಯಲ್ಲಿ 75 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಡಿ.ಎಲ್. ಸೌಮ್ಯ – ಪ್ರಥಮ ಬಹುಮಾನ, ಹರ್ಷಿತಾ – ದ್ವಿತೀಯ ಬಹುಮಾನ, ಪೂಜಾಶ್ರೀ – ತೃತೀಯ ಬಹುಮಾನ ಹಾಗೂ ಶಿಲ್ಪಾ, ರಮ್ಯ ಸಮಾಧಾನಕರ ಬಹುಮಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts