More

    ಮಹಾಕಾವ್ಯಗಳ ಆದರ್ಶ ರಕ್ಷಣೆ ಅವಶ್ಯ: ಸಾಹಿತಿ ತಿಪ್ಪಣ್ಣ ಮರಿಕುಂಟೆ ಅನಿಸಿಕೆ

    ಚಳ್ಳಕೆರೆ: ವಾಲ್ಮೀಕಿ ರಾಮಾಯಣದಲ್ಲಿ ಗ್ರಾಮೀಣ ಜನಜೀವನದ ಸಂಬಂಧ ಮತ್ತು ಸಾಂಸ್ಕೃತಿಕ ಸತ್ಯ ಸಂಗತಿಗಳಿವೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಅಭಿಪ್ರಾಯಪಟ್ಟರು.

    ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಬುಧವಾರ ಗ್ರಾಮೀಣ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬದಲಾಗುತ್ತಿರುವ ಸಮಾಜದಲ್ಲಿ ಕೌಟುಂಬಿಕ ಸಂಬಂಧಗಳು ಮರೆಯಾಗುತ್ತಿವೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಆದರ್ಶಗಳನ್ನು ಸಮಾಜದಲ್ಲಿ ಉಳಿಸಿಕೊಳ್ಳಬೇಕಿದೆ. ಕಲೆ ಮತ್ತು ಕೌಟುಂಬಿಕ ಸಂಬಂಧಗಳು ಹಳ್ಳಿಗಳಲ್ಲಿ ಮಾತ್ರ ಜೀವಂತವಾಗಿವೆ. ಪ್ರತಿಭಾವಂತ ಕಲಾವಿದರು ಮತ್ತು ಕೃಷಿಕ ವರ್ಗವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಗತ್ಯವಿದೆ ಎಂದು ಹೇಳಿದರು.

    ಶಿಕ್ಷಕ ಕೋಡಪ್ಪ ಮಾತನಾಡಿ, ಹಳ್ಳಿಗರ ಜನಜೀವನ ಸುಧಾರಣೆ ಆಗಬೇಕಿದೆ. ಶಿಕ್ಷಣ ಜಾಗೃತಿಯಲ್ಲಿ ಬದುಕಿನ ಭದ್ರತೆ ಕಂಡುಕೊಳ್ಳಬೇಕು. ಸಮಾಜವನ್ನು ಪರಿಪೂರ್ಣ ಅರ್ಥೈಸಿಕೊಳ್ಳಲು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಸಮಾಜಸೇವಕ ಬಿ.ಜಿ. ವೆಂಕಟೇಶ್, ಪ್ರಗತಿಪರ ರೈತ ಡಾ.ಆರ್.ಎ. ದಯಾನಂದಮೂರ್ತಿ ಅವರನ್ನು ಸನ್ಮಾನಿಸಲಾಯಿತು.

    ನಿವೃತ್ತ ನೌಕರ ಎಂ.ಒ. ಓಬಣ್ಣ, ಗ್ರಾಪಂ ಮಾಜಿ ಸದಸ್ಯ ಪೂಜಾರಿ ಗೋವಿಂದಪ್ಪ, ವಿನೋದಮ್ಮ, ಎ.ವಿ.ಮಹೇಶ, ಮಂಜುನಾಥ, ಹನುಮಂತಪ್ಪ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts