More

    ಇಪಿಎಫ್​ ಬಡ್ಡಿದರ 2019-20ನೇ ಸಾಲಿಗೂ ಶೇಕಡ 8.65 ಒದಗಿಸಲು ಕಾರ್ಮಿಕ ಸಚಿವಾಲಯದ ಒಲವು

    ನವದೆಹಲಿ: ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್​(ಇಪಿಎಫ್​)ನ ಠೇವಣಿಗೆ ಸಂಬಂಧಿಸಿದ ಬಡ್ಡಿದರವನ್ನು 2019-20ನೇ ಸಾಲಿಗೆ ಅನ್ವಯವಾಗುವಂತೆ ಶೇಕಡ 8.65 ಉಳಿಸಿಕೊಳ್ಳಲು ಕಾರ್ಮಿಕ ಸಚಿವಾಲಯ ಒಲವು ತೋರಿಸಿದೆ. ಇದು ಜಾರಿಯಾದರೆ ಇಪಿಎಫ್​ಒ(ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್​ ಆರ್ಗನೈಸೇಷನ್​)ದ ಅಂದಾಜು ಆರು ಕೋಟಿ ಚಂದಾದಾರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿವೆ.

    ಇಪಿಎಫ್​ಒದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಮಾರ್ಚ್​ 5ರಂದು ನಡೆಯುವ ಸಭೆಯಲ್ಲಿ ಈ ಕುರಿತ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಕೇಂದ್ರ ಕಾರ್ಮಿಕ ಸಚಿವಾಲಯವು 2018-19ನೇ ಸಾಲಿನಲ್ಲಿ ನೀಡಿದಂತೆ ಶೇಕಡ 8.65 ಬಡ್ಡಿದರವನ್ನೂ ಈ ವರ್ಷಕ್ಕೂ ಮುಂದುವರಿಸಲು ಒಲವು ತೋರಿದೆ. ಆರ್ಥಿಕ ವಿಳಂಬಗತಿಯ ಕಾರಣ ಇಪಿಎಫ್​ ಬಡ್ಡಿದರ ಶೇಕಡ 8.5ಕ್ಕೆ ಇಳಿಕೆಯಾಗಬಹುದು ಎಂಬ ವದಂತಿ ಹರಿದಾಡುತ್ತಿತ್ತು.

    ಆದಾಗ್ಯೂ, ಮೂಲಗಳ ಪ್ರಕಾರ ಇಪಿಎಫ್​ಒದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ ಮೀಟಿಂಗ್​ನ ಅಜೆಂಡಾ ಇನ್ನೂ ಅಂತಿಮವಾಗಿಲ್ಲ. ಇಪಿಎಫ್​ಒದ ಪ್ರಸಕ್ತ ಹಣಕಾಸು ಸಾಲಿನ ನಿರೀಕ್ಷಿತ ಆದಾಯ ಪ್ರಮಾಣ ಅಂದಾಜಿಸದೇ ಬಡ್ಡಿದರ ನಿಗದಪಡಿಸಲಾಗದು. ಈ ಕೆಲಸದ ಕಡೆಗೆ ಇಪಿಎಫ್​ಒ ಈಗ ಗಮನಹರಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts