More

    ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ

    ಕೊಪ್ಪಳ: ಜಿಲ್ಲೆಯ ತಾವರಗೇರಾ ಪಟ್ಟಣದ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ವಿಲೇವಾರಿ ಮಾಡದೆ ಬೆಂಕಿ ಇಟ್ಟು ಸುಡುತ್ತಿದ್ದು, ಪರಿಸರ ಮಾಲಿನ್ಯ ಜತೆಗೆ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

    ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ವಿಲೆವಾರಿಗಾಗಿಯೇ ಸಾಕಷ್ಟು ಅನುದಾನ ವ್ಯಯಿಸಲಾಗುತ್ತದೆ. ಒಣ ಮತ್ತು ಹಸಿ ಕಸ ವಿಂಗಡಿಸಬೇಕು ಆದರೆ, ಪಟ್ಟಣದಲ್ಲಿ ಬೇರ್ಪಡಿಸದೇ ಎಲ್ಲೆಂದರಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಸಿಂಧನೂರು ರಸ್ತೆಗೆ ಹೊಂದಿಕೊಂಡಿರುವ ಸ್ಮಶಾನ ಬಳಿಯ ಖಾಲಿ ಜಾಗದಲ್ಲಿ ವಿವಿಧ ಅಂಗಡಿಕಾರರು ಕಸ ಹಾಕುತ್ತಿದ್ದಾರೆ.

    ಮಾಂಸದ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೋಳಿ ತ್ಯಾಜ್ಯವೇ ಹೆಚ್ಚಾಗಿ ಸಂಗ್ರಹಗೊಳ್ಳುತ್ತಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಅಕ್ಕಪಕ್ಕದ ನಿವಾಸಿಗಳು, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಪಪಂ ಅಧಿಕಾರಿಗಳು, ತ್ಯಾಜ್ಯ ಸುರಿಯುವವರೇ ಬೆಂಕಿ ಇಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಇನ್ನು ಕೆಲವರು ತ್ಯಾಜ್ಯ ವಿಲೇವಾರಿ ಮಾಡದೇ ಪಪಂ ಸಿಬ್ಬಂದಿಯೇ ಬೆಂಕಿ ಹಾಕುತ್ತಿದ್ದಾರೆಂದು ಹೇಳುತ್ತಿದ್ದಾರೆ.

    ಇದನ್ನೂ ಓದಿ: ತಾವೇ ಕೊಂದು ಅಂತ್ಯಸಂಸ್ಕಾರ ನೆರವೇರಿಸಿದ ತಂದೆ,ಮಗ ಬಂಧನ

    ಪಟ್ಟಣ ವ್ಯಾಪ್ತಿಯಲ್ಲಿ 14 ವಾರ್ಡ್‌ಗಳಿದ್ದು, ಈ ಮೊದಲು ಪಟ್ಟಣ ಹೊರ ವಲಯದಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು. ಸದ್ಯ ನಂದಾಪುರ ರಸ್ತೆಯಲ್ಲಿ 12ಎಕರೆ ಜಮೀನು ಖರೀಸಲಾಗಿದೆ. ಇಲ್ಲಿಯೇ ಘಟಕ ಆರಂಭಿಸಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈಗಾಗಲೇ ಕಾಂಪೌಂಡ್ ನಿರ್ಮಿಸಲಾಗಿದೆ. ವಾರ್ಡ್‌ಗಳಲ್ಲಿ ಸ್ವಚ್ಛತಾ ವಾಹನಗಳ ಮೂಲಕ ಕಸ ಸಂಗ್ರಹಿಸಲಾಗುತ್ತಿದೆ. ಆದರೆ, ಪ್ರಮುಖ ಬೀದಿ, ವಾಣಿಜ್ಯ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪಟ್ಟಣದ ಖಾಲಿ ಜಾಗದಲ್ಲಿ ಹಾಕುವುದು ಮುಂದುವರಿದಿದೆ. ಇದರಿಂದ ಅನೈರ್ಮಲ್ಯ ಹೆಚ್ಚುತ್ತಿದೆ. ಮಳೆಗಾಲ ಆರಂಭವಾಗಿದ್ದು, ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚರಲಿದೆ. ಹೀಗಾಗಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ಶಾಶ್ವತ ಕ್ರಮ ಅಗತ್ಯ

    ಸಿಂಧನೂರು ರಸ್ತೆಯಲ್ಲಿ ನಿರಂತರ ತ್ಯಾಜ್ಯ ಸುರಿಯಲಾಗುತ್ತಿದೆ. ಆಗಾಗ ಸ್ವಚ್ಛತಾ ಕಾರ್ಯ ನಡೆದರೂ ತ್ಯಾಜ್ಯ ಹಾಕುವುದು ನಿಂತಿಲ್ಲ. ಅಲ್ಲದೆ ಬೆಂಕಿ ಹಚ್ಚುವುದರಿಂದ ಅನೈರ್ಮಲ್ಯ ಉಂಟಾಗುವ ಜತೆಗೆ ಜನರು ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿ ಯಾರೂ ಕಸ ಹಾಕದಂತೆ ಕಟ್ಟುನಿಟ್ಟಾಗಿ ಸೂಚಿಸಬೇಕಿದೆ. ದಂಡ ಹಾಕಿ ಕಠಿಣ ಕ್ರಮ ಕೈಗೊಂಡಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಪಪಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts