More

    ನೀರು, ಗಾಳಿ, ಭೂಮಿ ಸೃಷ್ಟಿ ಅಸಾಧ್ಯ: ಡಾ. ಧನಂಜಯ ಸರ್ಜಿ

    ಶಿವಮೊಗ್ಗ: ನೀರು, ಗಾಳಿ, ಆಹಾರ ಸೇರಿದಂತೆ ಪರಿಸರ ಕಲುಷಿತಗೊಳ್ಳುತ್ತಿದ್ದು ನಾವೆಲ್ಲರೂ ಕಲುಷಿತ ಆಹಾರವನ್ನೇ ಸೇವನೆ ಮಾಡುತ್ತಿದ್ದೇವೆ. ಒಬ್ಬ ಮನುಷ್ಯ ವರ್ಷಕ್ಕೆ ಸಿಮ್ ಕಾರ್ಡ್‌ನಷ್ಟು ಪ್ಲಾಸ್ಟಿಕ್‌ನ್ನು ತನಗೆ ಅರಿವಿಲ್ಲದೇ ಸೇವನೆ ಮಾಡುತ್ತಿದ್ದಾನೆ ಎಂದು ಸರ್ಜಿ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಡಾ. ಧನಂಜಯ ಸರ್ಜಿ ಹೇಳಿದರು.
    ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರೋಟರಿ ವಲಯ 11ರ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಭಾನುವಾರ ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ವಸುಂಧರೆ-2022ರಲ್ಲಿ ಜಲ ಸಾಕ್ಷರತೆಗೆ ಚಿಂತನ ಬಿಂದುಗಳು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
    ಜಗತ್ತಿನಲ್ಲಿ ಏನೆಲ್ಲಾ ಸಾಧನೆ ಮಾಡಿದ್ದರೂ ಗಾಳಿ, ನೀರು ಮತ್ತು ಭೂಮಿಯನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ಯಾರೋಬ್ಬರೂ ಮರೆಯಬಾರದು. ರಾಸಾಯನಿಕದಿಂದ ಕಲುಷಿತ ಆಗುತ್ತಿರುವ ಪರಿಸರದಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮಕ್ಕಳ ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ಸೃಜನಾಶೀಲ ಚಿಂತನಾ ಕ್ರಮ ಕಡಿಮೆ ಆಗುತ್ತಿದೆ. ಮಹಿಳೆಯರಿಗೆ ಅನೇಕ ರೀತಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.
    ವಸುಂಧರೆ-2022ರ ಚೇರ‌್ಮನ್ ವಸಂತ್ ಹೋಬಳಿದಾರ್, ಮಣಿಪಾಲ್ ಎಂಐಟಿ ಪ್ರಾಧ್ಯಾಪಕ ಡಾ. ನಾರಾಯಣ ಶೆಣೈ, ಂಧನ ಮತ್ತು ಪರಿಸರ ತಜ್ಞ ಅನಿಲ್ಕುಮಾರ್ ನಾಡಿಗೇರ್ ಹಾಗೂ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಮಾತನಾಡಿದರು. ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಸುನೀತಾ ಶ್ರೀಧರ, ಬಿ.ಸಿ.ಗೀತಾ, ದೇವ್ ಆನಂದ್, ಜಿ.ವಿಜಯಕುಮಾರ್, ಸುಮತಿ ಕುಮಾರಸ್ವಾಮಿ, ಸತೀಶ್ ಚಂದ್ರ, ಚಂದ್ರು, ಆದಿತ್ಯ, ಮನೋಜ್‌ಕುಮಾರ್, ಪುಟ್ಟಪ್ಪ, ಪ್ರಮೀಳಾ, ಮಂಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts