More

    ಮಕ್ಕಳ ಸಂತೆಯಿಂದ ವ್ಯಾಪಾರ ಜ್ಞಾನ ವೃದ್ಧಿ

    ಎನ್.ಆರ್.ಪುರ: ಮಕ್ಕಳ ಜ್ಞಾನಾರ್ಜನೆಗೆ ಹಾಗೂ ವ್ಯಾಪಾರ ಜ್ಞಾನಕ್ಕೆ ಮಕ್ಕಳ ಸಂತೆ ಅತ್ಯುತ್ತಮ ವೇದಿಕೆ ಎಂದು ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಹೇಳಿದರು.
    ಶನಿವಾರ ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣಕ್ಕಿಂತ ಹೊರ ಜಗತ್ತಿನ ವ್ಯಾವಹಾರಿಕ ಜ್ಞಾನ ಮುಖ್ಯ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
    ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಮಕ್ಕಳ ಸಂತೆ ಅರ್ಥಪೂರ್ಣ ಹಾಗೂ ಉಪಯುಕ್ತ ಕಾರ್ಯಕ್ರಮ. ಮನೆಯಲ್ಲಿ ಬೆಳೆದ ತರಕಾರಿ, ಸೊಪ್ಪು ತಂದು ಮಾರುತ್ತಿರುವುದರಿಂದ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ವೃದ್ಧಿಯಾಗುತ್ತದೆ ಎಂದರು.
    ಮುಖ್ಯಶಿಕ್ಷಕಿ ಪುಟ್ಟಮ್ಮ ಮಾತನಾಡಿ, ಅನುಭವದಿಂದ ಮಕ್ಕಳಲ್ಲಿ ಕಲಿಕೆ ಇನ್ನಷ್ಟು ಹೆಚ್ಚಿಸಲು ಸರ್ಕಾರ ಮಕ್ಕಳ ಸಂತೆ ಆಯೋಜಿಸಲು ಆದೇಶಿಸಿದೆ ಎಂದು ತಿಳಿಸಿದರು.
    ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್, ಸದಸ್ಯ ಸಂಕೇತ್, ರೇಷ್ಮಾ, ರಂಜಿತ್, ಕುಮಾರ, ಜಯಲಕ್ಷ್ಮೀ, ತಾಹೀರಾ, ಚಂದ್ರಕಲಾ, ಶಿಕ್ಷಕರಾದ ಮಲ್ಲಿಕಾರ್ಜುನ, ಶುಭಾ, ಅರುಣಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts