More

    ಬ್ರಿಟನ್ ವಾಪಸಿಗರ ಟೆಸ್ಟ್ ಪೂರ್ಣ

    ಮಂಗಳೂರು/ಉಡುಪಿ: ಬ್ರಿಟನ್ ಸಹಿತ ವಿದೇಶಗಳಿಂದ ಮಂಗಳೂರಿಗೆ ಆಗಮಿಸಿದವರೆಲ್ಲರ ಆರ್‌ಟಿ ಪಿಸಿಆರ್ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದ್ದು, ಯಾರಿಗೂ ಕೋವಿಡ್ ಬಾಧಿಸಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

    ಬ್ರಿಟನ್‌ನಿಂದ ಡಿ.7ರ ಬಳಿಕ ಮಂಗಳೂರಿಗೆ 66 ಮಂದಿ ಆಗಮಿಸಿದ್ದು, ರೂಪಾಂತರಿತ ಕರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಲು ನಿರ್ಧರಿಸಲಾಗಿತ್ತು. ಇವರಲ್ಲಿ ಮೂರು ಮಂದಿ ಇಂಗ್ಲೆಂಡ್‌ಗೆ ವಾಪಸ್ ಹೋಗಿದ್ದರೆ, ಉಳಿದವರು ಮಂಗಳೂರು ಸಹಿತ ವಿವಿಧ ಕಡೆಗಳಲ್ಲಿ ಇದ್ದರು. ಬುಧವಾರ ಮತ್ತು ಗುರುವಾರ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಶುಕ್ರವಾರ ಕೈಸೇರಿದ ವರದಿಯಲ್ಲಿ ಬಾಕಿ ಉಳಿದಿದ್ದ ಎಲ್ಲ 8 ಮಂದಿಗೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಗೆ ನ.28ರ ಬಳಿಕ ಬ್ರಿಟನ್ ಸಹಿತ ವಿವಿಧ ದೇಶಗಳಿಂದ 31 ಮಂದಿ ಆಗಮಿಸಿದ್ದು, ಇವರಲ್ಲಿ 28 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 31 ಮಂದಿ ಪೈಕಿ ಒಬ್ಬರು ದ.ಕ. ಜಿಲ್ಲೆಯವರು. ಇಬ್ಬರು ಬೆಂಗಳೂರಿನಲ್ಲಿದ್ದು, ಅವರು ಆರ್‌ಟಿ ಪಿಸಿಆರ್ ಪರೀಕ್ಷೆಗೆ ಆಗಮಿಸಿಲ್ಲ. ಜಿಲ್ಲೆಗೆ ಯಾವುದೇ ಆತಂಕವಿಲ್ಲ ಎಂದು ಮಾಹಿತಿ ನೀಡಲಾಗಿದೆ.

    405 ಸಕ್ರಿಯ ಪ್ರಕರಣ: ದ.ಕ. ಜಿಲ್ಲೆಯಲ್ಲಿ ಶುಕ್ರವಾರ 30 ಹೊಸ ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಯಾರೂ ಮೃತಪಟ್ಟಿಲ್ಲ. 33 ಮಂದಿ ಗುಣವಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣ 32,723, ಗುಣವಾದವರ ಸಂಖ್ಯೆ 31,586, ಸಕ್ರಿಯ ಪ್ರಕರಣಗಳು 405.
    ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 13 ಮಂದಿಗೆ ಕೋವಿಡ್ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 23,003ಕ್ಕೆೆ ಏರಿಕೆಯಾಗಿದ್ದು, 14 ಮಂದಿ ಗುಣವಾಗಿದ್ದಾರೆ. 73 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts