More

    ಆಂಗ್ಲರಿಗೆ ಶರಣಾದ ದಕ್ಷಿಣ ಆಫ್ರಿಕಾ; ಸರಣಿ ಸಮಬಲ

    ಜೊಹಾನ್ಸ್​ಬರ್ಗ್: ಸಂಘಟಿತ ನಿರ್ವಹಣೆ ತೋರಿದ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 2 ವಿಕೆಟ್​ಗಳಿಂದ ಸೋಲುಣಿಸಿದೆ. ಇದರಿಂದ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡಿದೆ. ಸರಣಿಯ 2ನೇ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

    ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ದಕ್ಷಿಣ ಆಫ್ರಿಕಾ, 7 ವಿಕೆಟ್​ಗೆ 256 ರನ್ ಗಳಿಸಿತು. ಪ್ರತಿಯಾಗಿ ಇಂಗ್ಲೆಂಡ್, ಮಧ್ಯಮ ಕ್ರಮಾಂಕದ ಕುಸಿತದ ನಡುವೆ 43.2 ಓವರ್​ಗಳಲ್ಲಿ 8 ವಿಕೆಟ್​ಗೆ 257 ರನ್ ಗಳಿಸಿ ಗೆಲುವಿನ ದಡ ಸೇರಿತು. ದಕ್ಷಿಣ ಆಫ್ರಿಕಾ ತಂಡ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಂದ್ಯದಲ್ಲಿ ನಸುಗೆಂಪು ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿದಿತ್ತು.

    ದಕ್ಷಿಣ ಆಫ್ರಿಕಾ: 7 ವಿಕೆಟ್​ಗೆ 256 (ಡಿಕಾಕ್ 69, ಬವುಮಾ 29, ಮಿಲ್ಲರ್ 69, ಸ್ಮಟ್ಸ್ 31, ಆದಿಲ್ 51ಕ್ಕೆ 3), ಇಂಗ್ಲೆಂಡ್: 43.2 ಓವರ್​ಗಳಲ್ಲಿ ಓವರ್​ಗಳಲ್ಲಿ 8 ವಿಕೆಟ್​ಗೆ 257 (ಬೇರ್​ಸ್ಟೋ 43, ರೂಟ್ 49, ಮಾರ್ಗನ್ 9, ಡೆನ್ಲಿ 66, ಬ್ಯಾಂಟನ್ 32, ಮೊಯಿನ್ ಅಲಿ 17*, ಬ್ಯೂರನ್ ಹೆಂಡ್ರಿಕ್ಸ್ 59ಕ್ಕೆ 3, ಎನ್​ಗಿಡಿ 63ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts