More

    ಇಂಗ್ಲೆಂಡ್ ತಂಡಕ್ಕೆ ಸತತ 4ನೇ ಜಯ, ಸೆಮೀಸ್ ಹಂತ ಖಾತ್ರಿ

    ಶಾರ್ಜಾ: ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ (101*ರನ್, 67 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಸಿದ ಅಬ್ಬರದ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿ ಫಲವಾಗಿ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 4ನೇ ಜಯ ದಾಖಲಿಸಿ ಮೊದಲ ಗುಂಪಿನಿಂದ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 26 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು. ಮತ್ತೊಂದೆಡೆ, 3ನೇ ಸೋಲು ಕಂಡ ಶ್ರೀಲಂಕಾ ತಂಡದ ಮುಂದಿನ ಹಾದಿ ಬಂದ್ ಆಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಆರಂಭಿಕ ವೈಫಲ್ಯದ ನಡುವೆಯೂ ಬಟ್ಲರ್ ಹಾಗೂ ಮಾರ್ಗನ್ ಜೋಡಿ 4ನೇ ವಿಕೆಟ್‌ಗೆ ಪೇರಿಸಿದ 112 ರನ್ ಜತೆಯಾಟದ ಫಲವಾಗಿ 4 ವಿಕೆಟ್‌ಗೆ 163 ರನ್ ಕಲೆಹಾಕಿತು. ಬಳಿಕ ಈ ಸವಾಲಿನ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 19 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು.
    * ಬಟ್ಲರ್ ಆಸರೆ: ಇಂಗ್ಲೆಂಡ್ ತಂಡಕ್ಕೆ ಸ್ಪಿನ್ನರ್ ವನಿಂದು ಹಸರಂಗ (21ಕ್ಕೆ 3) ಆರಂಭಿಕ ಆಘಾತ ನೀಡಿದರು. ಇದರಿಂದ ಪವರ್ ಪ್ಲೇ ಹಂತಕ್ಕೆ ಇಂಗ್ಲೆಂಡ್ ತಂಡ 36 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಸಂಕಷ್ಟದ ಸುಳಿಗೆ ಸಿಲುಕಿತು. ಈ ವೇಳೆ ಜತೆಯಾದ ಬಟ್ಲರ್ ಹಾಗೂ ಮಾರ್ಗನ್ ಆರಂಭಿಕ ಆಘಾತವನ್ನು ಲೆಕ್ಕಿಸದೆ ಸ್ಫೋಟಿಸಿ ತಂಡಕ್ಕೆ ನೆರವಾದರು. ಕಡೇ ಓವರ್‌ನಲ್ಲಿ ಬಟ್ಲರ್ 14 ರನ್ ಕಸಿಯುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

    ಇಂಗ್ಲೆಂಡ್: 4 ವಿಕೆಟ್‌ಗೆ 163 (ಜೋಸ್ ಬಟ್ಲರ್ 101*, ಇವೊಯಿನ್ ಮಾರ್ಗನ್ 40, ವನಿಂದು ಹಸರಂಗ 21ಕ್ಕೆ 3). ಶ್ರೀಲಂಕಾ: 19 ಓವರ್‌ಗಳಲ್ಲಿ 137 (ವನಿಂದು ಹಸರಂಗ 34, ಮೊಯಿನ್ ಅಲಿ 15ಕ್ಕೆ 2, ಆದಿಲ್ ರಶೀದ್ 19ಕ್ಕೆ 2, ಕ್ರೀಸ್ ಜೋರ್ಡಾನ್ 24ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts