More

    ಬೃಹತ್​ ಮೊತ್ತದತ್ತ ಆತಿಥೇಯ ಇಂಗ್ಲೆಂಡ್​ ತಂಡ

    ಮ್ಯಾಂಚೆಸ್ಟರ್​: ಆಲ್ರೌಂಡರ್​ ಬೆನ್​ ಸ್ಟೋಕ್ಸ್​ (172*ರನ್, 349 ಎಸೆತ, 17 ಬೌಂಡರಿ, 2 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್​ಮನ್​ ಡೊಮಿನಿಕ್​ ಸಿಬ್ಲೆ (120ರನ್​, 372 ಎಸೆತ, 5 ಬೌಂಡರಿ) ಜೋಡಿ ಕಟ್ಟಿದ ಜವಾಬ್ದಾರಿಯುತ ಇನಿಂಗ್ಸ್​ ಫಲವಾಗಿ ಆತಿಥೇಯ ಇಂಗ್ಲೆಂಡ್​ ತಂಡ ದ್ವೀತಿಯ ಟೆಸ್ಟ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಬೃಹತ್​ ಮೊತ್ತದತ್ತ ಮುಖಮಾಡಿದೆ. ಓಲ್ಡ್​ ಟ್ರಾಫೋಡ್​ರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್​ಗೆ 207 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​, ಎರಡನೇ ದಿನದಾಟದ ಚಹಾವಿರಾಮದ ವೇಳೆಗೆ 139 ಓವರ್ ಗಳಲ್ಲಿ 5 ವಿಕೆಟ್ ಗೆ 378 ರನ್​ ಕಲೆಹಾಕಿದೆ. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್​ 3 ವಿಕೆಟ್​ಗೆ 264 ರನ್​ ಪೇರಿಸಿತ್ತು. ಶತಕ ಸಾಧಕ ಬೆನ್​ ಸ್ಟೋಕ್ಸ್​ ಹಾಗೂ ಜೋಸ್​ ಬಟ್ಲರ್​ (12ರನ್, 28 ಎಸೆತ, 1 ಬೌಂಡರಿ) ವಿಕೆಟ್​ ಕಾಯ್ದುಕೊಂಡಿದ್ದಾರೆ.

    ಇನಿಂಗ್ಸ್ ಕಟ್ಟಿದ ಸಿಬ್ಲೆ-ಸ್ಟೋಕ್ಸ್  
    ಕ್ರಮವಾಗಿ 86 ಹಾಗೂ 59 ರನ್​ಗಳಿಂದ ಎರಡನೇ ದಿನದಾಟ ಆರಂಭಿಸಿದ ಡೊಮಿನಿಕ್​ ಸಿಬ್ಲೆ ಹಾಗೂ ಬೆನ್​ ಸ್ಟೋಕ್ಸ್​ ಜೋಡಿ ಒಂದು ಅವಧಿ ಪೂರ್ತಿ ಬ್ಯಾಟಿಂಗ್​ ಕಾಯ್ದುಕೊಂಡಿತು. ಮೊದಲ ದಿನದಾಟದ ಆರಂಭದಲ್ಲೇ ಮಿಂಚಿನ ದಾಳಿ ನಡೆಸಿದ ವಿಂಡೀಸ್​ ಬೌಲರ್​ಗಳು ಈ ಜೋಡಿ ಬೇರ್ಪಡಿಸಲು ವಿಫಲರಾದರು. ಮೊದಲ ದಿನದಾಟದ ಕಡೇ ಹಂತದಲ್ಲಿ ಸಿಬ್ಲೆ 68 ರನ್​ಗಳಿದ್ದ ವೇಳೆ ಗ್ಯಾಬ್ರಿಯಲ್​ ಎಸೆತದಲ್ಲಿ ಹೋಲ್ಡರ್​ ಕ್ಯಾಚ್​ ಕೈಚೆಲ್ಲಿದ್ದರು. ಇದರ ಲಾಭ ಗಿಟ್ಟಿಸಿಕೊಂಡ ಸಿಬ್ಲೆ ಟೆಸ್ಟ್​ ಕ್ರಿಕೆಟ್​ನಲ್ಲಿ 2ನೇ ಶತಕ ಸಿಡಿಸಿದರು. ಭೋಜನ ವಿರಾಮದ ವರೆಗೂ ಈ ಜೋಡಿ ವಿಕೆಟ್​ ಕಾಯ್ದುಕೊಂಡಿತು. ಭೋಜನ ವಿರಾಮದ ಬಳಿಕ ನಡೆದ ಮೊದಲ ಓವರ್​ನಲ್ಲೇ ಬೌಂಡರಿ ಸಿಡಿಸುವ ಮೂಲಕ ಸ್ಟೋಕ್ಸ್​ ಶತಕ ಪೂರೈಸಿದರು. ಈ ಜೋಡಿ 4ನೇ ವಿಕೆಟ್​ಗೆ 261 ರನ್​ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾಯಿತು. ಮೊದಲ ದಿನದಾಟದಲ್ಲಿ ಇಂಗ್ಲೆಂಡ್​ ಕಾಡಿದ ಪ್ರವಾಸಿ ತಂಡದ ಸ್ಪಿನ್ನರ್​ ರೋಸ್ಟನ್​ ಚೇಸ್​, ಈ ಜೋಡಿ ಬೇರ್ಪಡಿಸಿದರು. ಸಿಬ್ಲಿ ವಿಕೆಟ್​ ಕಬಳಿಸುವ ಮೂಲಕ ಈ ಜೋಡಿಯ ಸುದೀರ್ಘ ಇನಿಂಗ್ಸ್​ಗೆ ಬ್ರೇಕ್​ ಹಾಕಿದರು. ಬಳಿಕ ಬಂದ ಒಲಿ ಪೋಪ್​ (7) ಕೂಡ ಚೇಸ್​ಗೆ ವಿಕೆಟ್​ ಒಪ್ಪಿಸಿದರು. ಮೊದಲ ದಿನದಾಟದಲ್ಲಿ ಆತಿಥೇಯ  ತಂಡಕ್ಕೆ ಆರಂಭಿಕ ಆಘಾತ ನೀಡಿದ್ದ ರೋಸ್ಟನ್ ಚೇಸ್, ಶುಕ್ರವಾರವೂ ಎರಡು ವಿಕೆಟ್ ಕಬಳಿಸಿದ್ದಾರೆ.

    ಇಂಗ್ಲೆಂಡ್​: ಎರಡನೇ ದಿನದಾಟದ ಚಹಾವಿರಾಮದ ವೇಳೆಗೆ 139 ಓವರ್​ಗಳಲ್ಲಿ 5 ವಿಕೆಟ್​ಗೆ 378 (ಡೊಮಿನಿಕ್​ ಸಿಬ್ಲೆ 120, ಸ್ಟೋಕ್ಸ್​ 172*, ರೂಟ್​ 23, ರೋಸ್ಟನ್​ ಚೇಸ್​ 106ಕ್ಕೆ 4, ಅಲ್ಜಾರಿ ಜೋಸೆಫ್​ 70ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts