More

    ಪಾಕಿಸ್ತಾನ ತಂಡಕ್ಕೆ ಮೊಹಮದ್​ ರಿಜ್ವಾನ್​ ಆಸರೆ

    ಸೌಥಾಂಪ್ಟನ್​: ಅನುಭವಿ ವೇಗಿಗಳಾದ ಜೇಮ್ಸ್​ ಆಂಡರ್​ಸನ್​ (48ಕ್ಕೆ 3) ಹಾಗೂ ಸ್ಟುವರ್ಟ್​ ಬ್ರಾಡ್​ (48ಕ್ಕೆ 2) ಮಾರಕ ದಾಳಿ ನಡುವೆಯೂ ವಿಕೆಟ್​ ಕೀಪರ್​& ಬ್ಯಾಟ್ಸ್​ಮನ್​ ಮೊಹಮದ್​ ರಿಜ್ವಾನ್​ (53ರನ್​, 109 ಎಸೆತ, 4 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಪಾಕಿಸ್ತಾನದ 2ನೇ ಟೆಸ್ಟ್​ ಪಂದ್ಯದಲ್ಲಿ ಪ್ರತಿಹೋರಾಟ ನಡೆಸಿದೆ. ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶುಕ್ರವಾರದ ಚಹಾ ವಿರಾಮದ ವೇಳೆಗೆ 84.3 ಓವರ್​ಗಳಲ್ಲಿ 8 ವಿಕೆಟ್​ಗೆ 215 ರನ್​ ಪೇರಿಸಿದೆ. ಇದಕ್ಕೂ ಮೊದಲು ಮಳೆಯಿಂದಾಗಿ ದಿನದಾಟ ಆರಂಭಗೊಳ್ಳುವುದು ತಡವಾಯಿತು. ಭೋಜನ ವಿರಾಮದ ವರೆಗೂ ಕೇವಲ 16 ಓವರ್​ಗಳ ಆಟವಷ್ಟೇ ನಡೆಸಲಾಯಿತು. ಪಾಕಿಸ್ತಾನ ಮೊದಲ ದಿನದಾಟದಲ್ಲಿ 5 ವಿಕೆಟ್​ಗೆ 126 ರನ್​ ಗಳಿಸಿತ್ತು. ರಿಜ್ವಾನ್​ ಜತೆಗೆ ಮೊಹಮದ್​ ಅಬ್ಬಾಸ್​ (2) ಕ್ರೀಸ್​ನಲ್ಲಿದ್ದಾರೆ.

    ಪಾಕಿಸ್ತಾನ: 2ನೇ ದಿನದಾಟದ ಚಹಾ ವಿರಾಮದ ವೇಳೆಗೆ 84.3 ಓವರ್​ಗಳಲ್ಲಿ 8 ವಿಕೆಟ್​ಗೆ 215 (ಬಾಬರ್​ ಅಜಮ್​ 47, ಮೊಹಮದ್​ ರಿಜ್ವಾನ್​ 53, ಜೇಮ್ಸ್​ ಆಂಡರ್​ಸನ್​ 48ಕ್ಕೆ 3, ಸ್ಟುವರ್ಟ್​ ಬ್ರಾಡ್​ 48ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts