More

    ತಾಂತ್ರಿಕ ವಿದ್ಯಾರ್ಥಿಗಳಿಗೆ ದೇಶದ ಅಭಿವೃದ್ಧಿಗೆ ಶ್ರಮಿಸುವ ಗುರಿ ಇರಲಿ

    ಲಕ್ಷ್ಮೇಶ್ವರ: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದ ಅವಶ್ಯಕತೆ, ಬೇಡಿಕೆಗಳಿಗೆ ತಕ್ಕಂತೆ ಅಭ್ಯಾಸ, ಕೌಶಲ ಹಾಗೂ ಅವಿಷ್ಕಾರದಲ್ಲಿ ತೊಡಗಬೇಕು. ದೇಶದ ಅಭಿವೃದ್ಧಿಗೆ ಪೂರಕವಾಗಿ ಗುರಿ ಹೊಂದಿರಬೇಕು ಎಂದು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸಾಗರ ಮನಗಾವೆ ಸಲಹೆ ನೀಡಿದರು.

    ಶುಕ್ರವಾರ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 2023ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೀಳರಿಮೆ, ನಕಾರಾತ್ಮಕ ಚಿಂತನೆಯನ್ನು ಬದಿಗೊತ್ತಬೇಕು. ಧನಾತ್ಮಕ ಮನೋಭಾವ, ಆತ್ಮಸ್ಥೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧ್ಯವಿದೆ. ಔದ್ಯೋಗಿಕ ಯುಗದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಹೇರಳ ಅವಕಾಶಗಳಿವೆ. ಅವುಗಳನ್ನು ಹುಡುಕಿ ತೆಗೆದು ಅದರಲ್ಲಿ ಮುಂದುವರಿಯಬೇಕು. ಗ್ರಾಮೀಣ ಯುವಕರು ತಮ್ಮ ಜ್ಞಾನವನ್ನು ಅಭಿವ್ಯಕ್ತಗೊಳಿಸಬೇಕಾಗಿದೆ. ಅದರ ಜತೆ ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಮಾಡುವಂತಹ ಶ್ರೇಷ್ಠ ನಾಗರಿಕರು ನೀವಾಗಬೇಕು. ಮಕ್ಕಳಿಗಾಗಿ ಕಷ್ಟಪಟ್ಟ ತಂದೆ-ತಾಯಿಗೆ, ವಿದ್ಯೆ ನೀಡಿದ ಗುರುಗಳಿಗೆ ಗೌರವ ಕೊಡಬೇಕು ಎಂದು ಸಲಹೆ ನೀಡಿದರು.

    ಕಾಲೇಜಿನ ವಿವಿಧ ವಿಭಾಗ ವಿದ್ಯಾರ್ಥಿಗಳು ಹೊಸ ಆವಿಷ್ಕಾರ ಪ್ರದರ್ಶಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಾಚಾರ್ಯ ಉದಯಕುಮಾರ ಹಂಪಣ್ಣವರ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts