More

    ದತ್ತಿ ಇಲಾಖೆ ಆದೇಶ ಉಲ್ಲಂಘನೆಯಾಗದಿರಲಿ

    ಲಿಂಗಸುಗೂರು: ಧರ್ಮದಾಯ ಮತ್ತು ದತ್ತಿ ಇಲಾಖೆಗೆ ಒಳಪಟ್ಟಿರುವ ಗುರುಗುಂಟಾ ಅಮರೇಶ್ವರ ದೇವಸ್ಥಾನ ಪರಿಸರದಲ್ಲಿ ಕೆಲವರು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ದೇವಸ್ಥಾನ ಸಮಿತಿಯ ಆದಾಯ ಕಡಿತವಾಗಿದ್ದು, ಅನಧಿಕೃತ ವ್ಯಾಪಾರಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಎಸಿ ಅವಿನಾಶ ಶಿಂಧೆಗೆ ಭಕ್ತರು ಸೋಮವಾರ ಮನವಿ ಸಲ್ಲಿಸಿದರು.

    ಅಮರೇಶ್ವರ ಸುಕ್ಷೇತ್ರ 172 ಎಕರೆಗೂ ಹೆಚ್ಚು ಪ್ರದೇಶ ವ್ಯಾಪ್ತಿ ಹೊಂದಿದೆ. ಧರ್ಮದಾಯ ಮತ್ತು ದತ್ತಿ ಇಲಾಖೆ ಆದೇಶ ಉಲ್ಲಂಘಿಸಿ ದಾಸೋಹ ಭವನ ನಿರ್ಮಿಸಲಾಗಿದೆ. ಈ ಮೂಲಕ ದೇವಸ್ಥಾನ ಸಮಿತಿಗೆ ಬರಬೇಕಾದ ಕಾಣಿಕೆ ಮತ್ತು ದವಸ-ಧಾನ್ಯವನ್ನು ಸೆಳೆಯಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ದೂರಿದರು.

    ದೇವಸ್ಥಾನ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳ ಹರಾಜು, ವಾಹನ ನಿಲುಗಡೆ ಟೆಂಡರ್, ದೇವಸ್ಥಾನದ ಕಾರ್ಯ ಚಟುವಟಿಕೆಗಳಿಗೆ ಸಿಬ್ಬಂದಿ ನೇಮಕದಲ್ಲಿ ಅಕ್ರಮ ಎಸಗಲಾಗಿದೆ. ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪ್ರತಿವರ್ಷ ನಡೆಸಬೇಕು. ಸಿಬ್ಬಂದಿ ನೇಮಕದಲ್ಲಿ ನಿಯಮ ಪಾಲಿಸಬೇಕು. ಸಿಬ್ಬಂದಿಗೆ ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಾವತಿಸಬೇಕು. ದೇವಸ್ಥಾನದ ಆವರಣದಲ್ಲಿ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಯಾವುದೇ ಕಾರ್ಯ ಚಟುವಟಿಕೆ ನಡೆಯದಂತೆ ಗಮನ ಹರಿಸಬೇಕೆಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts