More

    ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ

    ಸಂಬರಗಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಗ್ರಾಮೀಣ ಪ್ರದೇಶದ ರೈತರು ಅಭಿವೃದ್ಧಿ ಹೊಂದಲು ಸಾಧ್ಯವಿದ್ದು, ಕಾರ್ಖಾನೆಯಲ್ಲಿ ಸ್ಥಾನಿಕ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಜವಳಿ ಹಾಗೂ ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

    ಸಮೀಪದ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಮಹಾರಾಷ್ಟ್ರ ಸಚಿವ ವಿಶ್ವಜಿತ ಕದಂ ಮಾಲೀಕತ್ವದ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ರೈತರ ಜಮೀನುಗಳಿಗೆ ನೀರು ಒದಗಿಸುವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.

    ಮಹಾರಾಷ್ಟ್ರದ ಸಹಕಾರ ಹಾಗೂ ಕೃಷಿ ಸಚಿವ ವಿಶ್ವಜಿತ ಕದಂ ಮಾತನಾಡಿ, ಸಕ್ಕರೆ ಕಾರ್ಖಾನೆಯು ಸುಮಾರು 2500 ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, 11 ತಿಂಗಳೊಳಗೆ ಕಾರ್ಖಾನೆಯ ಕೆಲಸ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು. ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಜತ್ ಶಾಸಕ ವಿಕ್ರಂ ಸಾವಂತ, ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾದ ಮೋಹನರಾವ ಕದಂ, ರಘುನಾಥ ಕದಂ, ಡಾ.ಶಿವಾಜಿರಾವ ಕದಂ ಹಾಗೂ ಶ್ರೀನಿವಾಸ ಪಾಟೀಲ, ಅಪ್ಪಾಸಾಹೇಬ ಅವತಾಡೆ, ನಾನಾಸಾಹೇಬ ಅವತಾಡೆ, ಚಂದ್ರಕಾಂತ ಇಮ್ಮಡಿ, ಆರ್.ಎಂ.ಪಾಟೀಲ, ಈಶ್ವರ ಕುಂಬಾರೆ, ಮಹಾದೇವ ಕೋರೆ, ಮುರಗೆಪ್ಪ ಮಗದುಮ್ಮ, ಬಾಳಾಸಾಹೇಬ ಪಾಟೀಲ ಇದ್ದರು. ದೀದಿ ಪಾಟೀಲ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts