More

    ನೌಕರರ ಸಂಘದ ಮೇಲೆ ಆರೋಪಿಸಿದವರ ಮೇಲೆ ಕ್ರಮವಾಗಲಿ

    ಕನಕಗಿರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲೆ ಹಾಗೂ ತಾಲೂಕು ಸಂಘಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ವಜಾ ಮಾಡುವಂತೆ ಒತ್ತಾಯಿಸಿರುವವರ ಮೇಲೆ ಕ್ರಮಕ್ಕೆ ಆಗ್ರಹಿಸಿ ನೌಕರರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಸಂಜಯ ಕಾಂಬ್ಳೆಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

    ಇದನ್ನೂ ಓದಿ: ರಾಜ್ಯಾಧ್ಯಕ್ಷರ ವಿರುದ್ಧ ಅನಗತ್ಯ ಆರೋಪ: ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆರೋಪ

    ತಾಲೂಕು ಅಧ್ಯಕ್ಷ ವೆಂಕಟ ಮಧುಸೂದನ ಮಾತನಾಡಿ, ಐವರು ಸರ್ಕಾರಿ ನೌಕರರು ಹಾಗೂ ಅಧ್ಯಕ್ಷರು ಸಂಘದ ಹಣ ದುರುಪಯೋಗಪಡಿಸಿಕೊಂಡಿದ್ದಾರೆಂದು ಸುಳ್ಳು ಆರೋಪ ಮಾಡಿ ಸಂಘದ ರಾಜ್ಯಾಧ್ಯಕ್ಷ, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ದೂರು ನೀಡಿರುತ್ತಾರೆ.

    ಷಡಕ್ಷರಿಯವರು ತಮ್ಮ ಅಧಿಕಾರಾವಧಿಯಲ್ಲಿ ನೌಕರರ ಸ್ನೇಹಿಯಾಗಿ ಹಲವು ಕೆಲಸಗಳನ್ನು ಮಾಡಿಸುವಲ್ಲಿ ಸಫಲರಾಗಿದ್ದಾರೆ. ಇವರ ಕಾರ್ಯವೈಖರಿ ಫಲವಾಗಿ ಶೇ.17 ಮಧ್ಯಂತರ ಪರಿಹಾರ ಸಿಕ್ಕಿದೆ. ಆರೋಗ್ಯ ಸಂಜೀವಿನಿ ಸೇರಿ ನಾನಾ ಸೌಲಭ್ಯಗಳು ನೌಕರರಿಗೆ ದೊರೆತಿದೆ. ಆದರೆ, ಇವರ ಕೆಲಸ ಮೆಚ್ಚದ ಕೆಲ ನೌಕರರು ಸಲ್ಲದ ಆರೋಪ ಹೊರಿಸಿ ವಜಾಕ್ಕೆ ಒತ್ತಾಯಿಸಿದ್ದಾರೆ. ಕೂಡಲೇ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಕಾರ್ಯದರ್ಶಿ ಶಿವಪ್ಪ ಹೆಳವರ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅನಿಲಕುಮಾರ, ಪದಾಧಿಕಾರಿಗಳಾದ ಸಿದ್ದಲಿಂಗಪ್ಪ, ಹುಸೇನಸಾಬ್, ಗುರುಪ್ರಸಾದ, ಪ್ರಕಾಶ ಮಹಿಪತಿ, ಪರಸಪ್ಪ ಹೊರಪೇಟೆ, ದೊಡ್ಡಪ್ಪ ಬಾವಿಕಟ್ಟಿ, ಮಂಜುನಾಥ್ ಹಾಸಗಲ್, ಶರಣಪ್ಪ, ಗುರುಶಾಂತಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts