More

    ಕೆಲಸ ಮಾಡದ ಅಧಿಕಾರಿಗಳ ಮೇಲೆ ಕ್ರಮವಾಗಲಿ

    ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಟೋಕರಿ ಕೋಲಿ ಸಮಾಜದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
    ಉಮೇಶ ಮುದ್ನಾಳ್ ಮಾತನಾಡಿ, ಜಿಲ್ಲೆಯ ವಿವಿಧ ಸಮಸ್ಯೆಗಳು ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿದೆ. ಜನರ ಸೇವೆ ಮಾಡಲು ಇರುವ ಅಧಿಕಾರಿ ವರ್ಗ ನಿರ್ಲಕ್ಷೃದಿಂದ ವತರ್ಿಸುತ್ತಿರುವುಉದ ಖಂಡನಾರ್ಹ ಎಂದು ಆರೋಪಿಸಿದರು.

    3 ತಿಂಗಳ ಹಿಂದೆ ಜಿಲ್ಲಾಡಳಿತ ನಗರಸಭೆಗೆ ಲಘು ವಾಹನ ನಿಲುಗಡೆ ಸ್ಥಳ ಗುರುತಿಸುವಂತೆ ಸೂಚನೆ ನೀಡಿತ್ತು. ಆದರೆ, ಇದುವರೆಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಗುರುಮಠಕಲ್ ಕ್ಷೇತ್ರದ ಗಣಪೂರ ಗ್ರಾಮದಲ್ಲಿ 2 ವರ್ಷಗಳ ಹಿಂದೆ ನಿಮರ್ಾಣವಾದ ಎರಡು ನೀರಿನ ಟ್ಯಾಂಕ್ ಉದ್ಘಾಟನೆ ಭಾಗ್ಯ ಕಾಣದೇ ನಿಂತಿವೆ.ಸಕರ್ಾರಿ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಶಹಾಪುರ ತಾಲೂಕಿನ ದೋರಹನಳ್ಳಿ ಗ್ರಾಮದಲ್ಲಿ ಸುಮಾರು 4-5 ವರ್ಷಗಳ ಹಿಂದೆ ನಿಮರ್ಾಣಗೊಮಡ ಬೃಹತ್ ನೀರಿನ ಮೇಲ್ತೊಟ್ಟಿ ಉದ್ಘಾಟನೆ ಆಗದೇ ಬಳಕೆ ಮಾಡುತ್ತಿಲ್ಲ. ಮುದ್ನಾಳ, ಟೋಕಾಪುರ ಮತ್ತು ಗೋಡಿಹಾಳ ಗ್ರಾಮಗಳಲ್ಲಿ ಸಕರ್ಾರಿ ಜಾಗೆ ಅತಿಕ್ರಮಿಸಿದ ಮನೆ ನಿಮರ್ಿಸಿದವರ ವಿರುದ್ಧ ಯಾವುದೇ ನೋಟೀಸ್ ಕೊಡದೇ ಅಕ್ರಮ ಎಸಗಿದವರ ಜತೆಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಮೂರು ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಬಗ್ಗೆ ಗಮನ ಸೆಳೆದರೂ, ಮಾಧ್ಯಮಗಳಲ್ಲಿ ವರದಿ ಪ್ರಕಟವಾದರೂ ಸಂಬಂಧಿತರು ಎಚ್ಚೆತ್ತುಕೊಳ್ಳುತ್ತಿಲ್ಲ. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ವಡಗೇರಿ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಅರಣ್ಯ ಮತ್ತು ಗೈರಾಣಿ ಜಾಗೆ ಸುಮಾರು 40 ಎಕರೆ ಇದೆ. ಇದನ್ನು ಒತ್ತುವರಿ ಮಾಡಲಾಗಿದೆ. ಸಂಬಂಧಿಸಿದ ತಹಸೀಲ್ದಾರ ಮತ್ತು ಅರಣ್ಯ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಸವರ್ೇ ಮಾಡದೇ ಗಡಿ ನಿಗದಿ ಮಾಡದೇ ನಿರ್ಲಕ್ಷ್ಯ ಮಾಡಿ ನಾಮಕೆವಾಸ್ತೆ ಸ್ಥಳಕ್ಕೆ ಭೇಟಿ ನೀಡಿ ನಿರ್ಲಕ್ಷ್ಯ ತೋರಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts