More

    ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ವಾಪಸ್ ಕಳಿಸಿದರೆ ಹುಷಾರ್! ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

    ನವದೆಹಲಿ: ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ವಾಪಸ್ ಕಳಿಸಿ, ವಿವಿಧೆಡೆ ಅಲೆಯುವಂತೆ ಮಾಡುವ ಆಸ್ಪತ್ರೆಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

    ರಕ್ತ ಬದಲಾವಣೆ, ಡಯಾಲಿಸಿಸ್ ಮುಂತಾದ ಪ್ರಕ್ರಿಯೆಗಳಿಗೆ ಕಾಯಲು ಸಾಧ್ಯವಿಲ್ಲ. ಕ್ಷುಲ್ಲಕ ಕಾರಣಕ್ಕೆ ರೋಗಿಗಳನ್ನು ಅಲೆದಾಡಿಸಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಖಾಸಗಿ ಆಸ್ಪತ್ರೆಗಳಿಗೆ ತಾಕೀತು ಮಾಡಿದ್ದಾರೆ.

    ಚಿಕಿತ್ಸೆ ನೀಡದೆ ಬೇರೆ ಬೇರೆ ಆಸ್ಪತ್ರೆಗಳಿಗೆ ಕಳಿಸುವುದರಿಂದ ಒಂದು ಜೀವವೇ ನಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಹರ್ಷವರ್ಧನ್ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.

    ‘ಕರೊನಾ ಹಾವಳಿ ಇರುವ ಈ ಕಾಲವು ಪ್ರತಿಯೊಬ್ಬರಿಗೂ ಪರೀಕ್ಷಾ ಸಮಯವಾಗಿದೆ. ಅನಾರೋಗ್ಯಪೀಡಿತ ಹಾಗೂ ತುರ್ತಾಗಿ ವೈದ್ಯಕೀಯ ಆರೈಕೆ ಅಗತ್ಯವಾದ ರೋಗಿಗಳು ಆಸ್ಪತ್ರೆ ಹುಡುಕಲೇ ಪರದಾಡುವಂತಾಗಿದೆ’ ಎಂದು ಡಾ. ಹರ್ಷವರ್ಧನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಆಡಳಿತ ಪಕ್ಷದ ಶಾಸಕನ ಕಿರುಕುಳಕ್ಕೆ ವೈದ್ಯ ಆತ್ಮಹತ್ಯೆ, ಶಾಸಕನ ಕಿರುಕುಳಕ್ಕೆ ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts