More

    ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಜನರು ಅರಿತುಕೊಳ್ಳುತ್ತಿಲ್ಲ – ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಸಮಾಧಾನ

    ಕುಷ್ಟಗಿ: ಕರೊನಾ ವೈರಾಣು ಹರಡುವಿಕೆಯಿಂದಾಗಿ ಉಂಟಾಗಿರುವ ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಜನರು ಅರಿತುಕೊಳ್ಳುತ್ತಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಸಮಾಧಾನ ವ್ಯಕ್ತಪಡಿಸಿದರು.

    ದೇಶದಲ್ಲಿ ಸೋಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಲಾಕ್‌ಡೌನ್ ನಿಯಮ ಪಾಲನೆಯಾಗುತ್ತಿಲ್ಲ. ಮುಖ್ಯಮಂತ್ರಿಗಳು ಸಮಿತಿ ಮೂಲಕ ಪಡೆದ ವರದಿಯಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಲಾಕ್ ಡೌನ್‌ನಿಂದಾಗಿ ಶೇ.30ಕ್ಕಿಂತ ಹೆಚ್ಚು ಜನ ದಿನದ ಊಟಕ್ಕೂ ಪರದಾಡುತ್ತಿದ್ದಾರೆ. ಆದಾಗ್ಯೂ ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಸಲಾಗುತ್ತಿದೆ. ಏ.14ರ ನಂತರವೂ ಲಾಕ್‌ಡೌನ್ ಮುಂದುವರಿಯಲಿದೆ. ಜಿಲ್ಲೆಯ ಜನರೂ ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಬೇಕಿದೆ. ಗ್ರಾಮೀಣ ಭಾಗದ ಜನರು ಕಷ್ಟವಾದರೂ ಸರಿ ತಿಂಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿಸಿಟ್ಟುಕೊಳ್ಳುವುದು ಒಳಿತು. ಲಾಕ್ ಡೌನ್ ಮಾಡಿರುವುದು ಜನರ ಒಳತಿಗಾಗಿಯೇ ಆಗಿರುವುದರಿಂದ ಮನೆಯಿಂದ ಹೊರಬರುವ ಜನರ ಜತೆ ಪೊಲೀಸರೂ ಸಂಯಮದಿಂದ ವರ್ತಿಸಬೇಕು. ಜನರೇನಾದರೂ ಅಸಭ್ಯವಾಗಿ ವರ್ತಿಸಿದರೆ ಅವರ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ತಿಂದು ಕುಡೀದಿದ್ರೆ ಸಾಯಲ್ಲ!
    ಇಸ್ಲಾಂ ಧರ್ಮ ಹಾಗೂ ಎಸ್ಸಿ, ಎಸ್ಟಿ ಸಮುದಾಯದ ಕೆಲವೇ ಜನರು ವಿಶೇಷ ಸಂದರ್ಭಗಳಲ್ಲಿ ಸೇವಿಸುತ್ತಿದ್ದ ಮಾಂಸಾಹಾರ ಬಹುತೇಕರ ಆಹಾರ ಪದ್ಧತಿಯಾಗಿದೆ. ಒಂದಷ್ಟು ದಿನ ಮಾಂಸ ತಿನ್ನದಿದ್ರೆ, ಮದ್ಯ ಸೇವಿಸದಿದ್ರೆ ಯಾರೂ ಸಾಯುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮದ್ಯ ಹಾಗೂ ಮಾಂಸ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ಶಾಸಕ ಬಯ್ಯಪುರ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts