More

    ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

    ಹನುಮಸಾಗರ: ಬ್ರಿಟಿಷರ ನಿದ್ದೆಗೆಡಿಸಿ ಅವರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ದೇಶದ ಸ್ವಾತಂತ್ರೃಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಅಶೋಕ ವಾಲಿಕಾರ ಹೇಳಿದರು.

    ಇದನ್ನೂ ಓದಿ: http://ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

    ಸಮೀಪದ ಬಾದಿಮನಾಳ ಗ್ರಾಮದಲ್ಲಿ ರಾಯಣ್ಣನ ಜಯಂತಿ ನಿಮಿತ್ತ ಇತ್ತಿಚೆಗೆ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

    ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮನ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಧೈರ್ಯ, ಶೌರ್ಯ, ಸಾಹಸಕ್ಕೆ ಹೆಸರುವಾಸಿ. ಯುವಕರು ದುಶ್ಚಟಗಳಿಗೆ ದಾಸರಾಗದೇ ಓದುವ ಸಮಯದಲ್ಲಿ ಸರಿಯಾಗಿ ಅಭ್ಯಾಸ ಮಾಡಿ, ಇತರರಿಗೆ ಮಾದರಿ ವ್ಯಕ್ತಿಗಳಾಗಿ ಬೆಳೆಯಬೇಕು.

    ಒಂದು ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಮಾರ್ಗದಿಂದ ಮುಂದೆ ಬರಬೇಕು ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.

    ಗ್ರಾಮದ ಕನಕದಾಸ ದೇವಸ್ಥಾನದಿಂದ ಪ್ರಾರಂಭವಾದ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಮುಖಂಡರಾದ ರವಿ ಪರಸಾಪೂರ, ಕಳಕಪ್ಪ ಕ್ಯಾದಿಗುಂಪಿ, ಶರಣಪ್ಪ ಪರಸಾಪೂರ, ಬಸವರಾಜ ಕಟ್ಟಿಮನಿ ಕುಮಾರ ಪರಸಾಪೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts