More

    ಏಳುಕೊಳ್ಳದ ನಾಡಿನತ್ತ ಭಕ್ತಸಾಗರ

    ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಶನಿವಾರ ಭಾರತ ಹುಣ್ಣಿಮೆಯನ್ನು ಸರಳವಾಗಿ ಆಚರಿಸಲಾಯಿತು. ಅಧಿಕಾರಿಗಳು, ಅರ್ಚಕರು ಸಮ್ಮುಖದಲ್ಲಿ ಸಾಂಕೇತಿಕವಾಗಿ ಧಾರ್ಮಿಕ ಆಚರಣೆ ಜರುಗಿದವು. ಆದರೆ, ಯಲ್ಲಮ್ಮನಗುಡ್ಡ ಸುತ್ತಲಿನ ಗ್ರಾಮಗಳಲ್ಲಿ ಭಾರತ ಹುಣ್ಣಿಮೆ ಸಂಭ್ರಮ ಜೋರಾಗಿತ್ತು.

    ಕರೊನಾ ಹಿನ್ನೆಲೆಯಲ್ಲಿ ಶನಿವಾರ ಜರುಗಬೇಕಿದ್ದ ಭಾರತ ಹುಣ್ಣಿಮೆ ಜಾತ್ರೆಯನ್ನು ಸರ್ಕಾರ ರದ್ದುಪಡಿಸಿತ್ತು. ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೂ ನಿಬರ್ಂಧ ಹೇರಿತ್ತು. ಆದರೆ, ನಿರ್ಬಂಧದ ಮಧ್ಯೆಯೂ ಸಾವಿರಾರು ಭಕ್ತರು ಶುಕ್ರವಾರ ರಾತ್ರಿಯಿಂದಲೇ ಯಲ್ಲಮ್ಮನಗುಡ್ಡಕ್ಕೆ ಬರಲಾರಂಭಿಸಿದರು. ಆದರೆ, ಗುಡ್ಡಕ್ಕೆ ಸಂಪರ್ಕಿಸುವ ಮಾರ್ಗ ಮಧ್ಯೆಯೇ ಪೊಲೀಸರು ತಡೆದಿದ್ದರಿಂದ ತಾವಿರುವ ಗ್ರಾಮಗಳ ಕೃಷಿಭೂಮಿಯಲ್ಲೇ ಭಕ್ತರು ಉಳಿದುಕೊಂಡರು. ಅಲ್ಲಿಯೇ ಧಾರ್ಮಿಕ ವಿಧಿ-ವಿಧಾನ ಪೂರೈಸಿದರು. ಪ್ರತಿವರ್ಷ ಭಾರತ ಹುಣ್ಣಿಮೆಗೆ 35 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುತ್ತಿದ್ದರು. ಆದರೆ, ಕರೊನಾ ವೈರಸ್‌ನಿಂದಾಗಿ ಈ ಬಾರಿ ಯಲ್ಲಮ್ಮನಗುಡ್ಡದಲ್ಲಿ ಭಕ್ತರ ಸಂಭ್ರಮ ಸಂಭ್ರಮ ಕಂಡುಬರಲಿಲ್ಲ.

    ಯಲ್ಲಮ್ಮದೇವಿಯು ಮುತ್ತೈದೆಯಾದ ಸವಿನೆನಪಿಗಾಗಿ ಭಕ್ತರು ತಾವು ಉಳಿದುಕೊಂಡಲ್ಲೇ ಒಲೆ ಹೂಡಿ, ಕರಿಗಡಬು, ಹೋಳಿಗೆ, ಕರ್ಚಿಕಾಯಿ, ವಡೆ ಸೇರಿ ವಿವಿಧ ತಿನಿಸು ತಯಾರಿಸಿದರು. ಬಳಿಕ ಪಡ್ಡಲಗಿ ತುಂಬಿ ದೇವಿಗೆ ನೈವೇದ್ಯ ಅರ್ಪಿಸಿದರು. ಮಹಿಳೆಯರು ಹಸಿರು ಬಣ್ಣದ ಬಳೆ ತೊಟ್ಟು ಮುತ್ತೈದೆತನದ ಸಂಭ್ರಮ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts