More

    ಹಂದಿ ಮಿದುಳಿನಲ್ಲಿ ಕಂಪ್ಯೂಟರ್​ ಚಿಪ್​; ಶೀಘ್ರದಲ್ಲಿ ಮಾನವರಿಗೂ ಅಳವಡಿಕೆ; ಆಸಕ್ತರಿಗಾಗಿ ನಡೆದಿದೆ ಹುಡುಕಾಟ…!

    ಏಲಾನ್​ ಮಸ್ಕ್​…! ಸದ್ಯ ತಾಂತ್ರಿಕ, ಬಾಹ್ಯಾಕಾಶ ಸಂಶೋಧನೆ ಹಾಗೂ ವೈಜ್ಞಾನಿಕ ರಂಗದಲ್ಲಿ ಉತ್ತುಂಗದಲ್ಲಿರುವ ಹೆಸರು.

    ಅಮೆರಿಕದ ಬಾಹ್ಯಾಕಾಶ ಯಾನಿಗಳನ್ನು ತನ್ನದೇ ಸ್ಪೇಸ್​ ಎಕ್ಸ್​ ಕಂಪನಿ ತಯಾರಿಸಿದ್ದ ನೌಕೆಯಲ್ಲಿ ಕಳುಹಿಸಿದ್ದ ಮಸ್ಕ್​, ಇದಾದ ಬಳಿಕ ಈತನದ್ದೇ ಟೆಸ್ಲಾ ಕಂಪನಿ ಒಂದೇ ಚಾರ್ಜ್​ನಲ್ಲಿ ಸಾವಿರಾರು ಕಿ.ಮೀ. ದೂರದವರೆಗೆ ಸಂಚರಿಸುವ ವಿದ್ಯುತ್​ ಚಾಲಿತ ಕಾರಿನ ಬ್ಯಾಟರಿ ತಯಾರಿಸಿತ್ತು.

    ಇದೀಗ, ಇದೇ ಮಸ್ಕ್​ ಒಡೆತನದ ನ್ಯೂರಾಲಿಂಕ್​ ಕಂಪನಿ ಮತ್ತೊಂದು ಪವಾಡವನ್ನೇ ಮಾಡಿದೆ. ಮನಸ್ಸಿನ ಭಾವಗಳ ಮೂಲಕ ಕಂಪ್ಯೂಟರ್​ ನಿಯಂತ್ರಿಸಬಲ್ಲ ಕಂಪ್ಯೂಟರ್​ ಚಿಪ್​ವೊಂದನ್ನು ಕಂಡುಹಿಡಿದಿದ್ದಾರೆ. ಇದಕ್ಕೆ ಫಿಟ್​ಬಿಟ್​ ಎಮದು ಹೆಸರಿಸಲಾಗಿದೆ. ಅದನ್ನು ಹಂದಿಗೆ ಯಶಸ್ವಿಯಾಗಿ ಅಳವಡಿಸಿದ್ದಾರೆ.

    ಇದನ್ನೂ ಓದಿ; ಪುರುಷರಿಗೆ ಹೋಲಿಸಿದಲ್ಲಿ ಸ್ತ್ರೀಯರಲ್ಲೇಕೆ ಹೆಚ್ಚು ಮಾರಕವಲ್ಲ ಕರೊನಾ? ಸಂಶೋಧನೆಯಲ್ಲಿ ಬಯಲಾಯ್ತು ಕಾರಣ…! 

    ಎಲಾನ್​ ಮಸ್ಕ್​ ಈ ಹಂದಿಯನ್ನು ಜಗತ್ತಿನೆದುರು ಪ್ರದರ್ಶಿಸಿದ್ದಾರೆ. ಈ ಹಂದಿಗೆ ಗೆಟ್ರುಡ್​ ಎಂದು ಹೆಸರಿಸಲಾಗಿದೆ. ಕಂಪ್ಯೂಟರ್​ ಚಿಪ್​ ಬಗ್ಗೆ ಮಾಹಿತಿ ನೀಡಿದ ಎಲಾನ್​ ಮಸ್ಕ್​, ಚಿಪ್​ ಅಳವಡಿಸಿದ ಹಂದಿಯ ದೃಶ್ಯಗಳನ್ನು ತೋರಿಸಿದ್ದಾರೆ. ಚಿಕ್ಕ ನಾಣ್ಯದ ಗಾತ್ರದ, ಅತಿ ಚಿಕ್ಕ ವೈರ್​ಗಳನ್ನು ಹೊಂದಿದ್ದ ಚಿಪ್​ಅನ್ನು ಇದಕ್ಕೆ ಎರಡು ತಿಂಗಳ ಕಾಲ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ.

    ನ್ಯೂರಾಲಿಂಕ್​ ಕಂಪನಿಯನ್ನು 2016ರಲ್ಲಿ ಸ್ಥಾಪಿಸಲಾಗಿದ್ದು, ಮಿದುಳಿಗೂ ಯಂತ್ರಕ್ಕೂ ವೈರ್​ಗಳಿಲ್ಲದೇ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಚಿಪ್​ ಅಳವಡಿಸಿಕೊಂಡು ಜನರು ತಮ್ಮ ನೆನಪುಗಳನ್ನು ಕಾಪಾಡಿಕೊಳ್ಳುವುದಲ್ಲದೇ, ಮರುಕಳಿಸಿಕೊಳ್ಳಬಹುದು ಎಂದು ಮಸ್ಕ್​ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಮೂರೇ ವಾರದಲ್ಲಿ ಬ್ರಿಟನ್​ ಜನರಿಗೆ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ 

    ಕಳೆದ ಜುಲೈನಲ್ಲಿ ಕಿವಿಯ ಹಿಂಭಾಗದಲ್ಲಿ ಮಿದುಳಿಗೆ ಜೋಡಿಸುವ ಚಿಕ್ಕವೈರ್​ಗಳಿದ್ದ ಸಾಧನವನ್ನು ಹಾಗೂ ಇನ್ನೊಂದು ಉಪಕರಣವನ್ನು ಅನಾವರಣಗೊಳಿಸಿತ್ತು. ಈ ಬಾರಿ ಅದಕ್ಕಿಂತಲೂ ಚಿಕ್ಕ ಸಾಧನ ಬಿಡುಗಡೆ ಮಾಡಿದೆ. ಇದಕ್ಕೆ ಕಿವಿಯ ಹೊರಭಾಗದಲ್ಲಿ ಇನ್ನೊಂದು ಸಾಧನ ಜೋಡಿಸುವ ಅವಶ್ಯಕತೆ ಇಲ್ಲವೆಂದು ಹೇಳಿದೆ.
    ಶೀಘ್ರದಲ್ಲಿಯೇ ಕಂಪ್ಯೂಟರ್​ ಚಿಪ್​ಅನ್ನು ಮಾನವರ ಮಿದುಳಿಗೂ ಅಳವಡಿಸಲಾಗುತ್ತದೆ. ಇದಕ್ಕಾಗಿ ಆಸಕ್ತರ ಹುಡುಕಾಡದಲ್ಲಿದೆ ನ್ಯೂರಾಲಿಂಕ್​ ಕಂಪನಿ.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts