More

    ಟ್ವಿಟರ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಎಲಾನ್ ಮಸ್ಕ್?

    ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲಿದ್ದಾರಾ?

    – ವೋಟಿಂಗ್​ ಒಂದರ ಫಲಿತಾಂಶ ಇಂಥದ್ದೊಂದು ಅನುಮಾನವನ್ನು ಮೂಡಿಸಿದೆ. ಏಕೆಂದರೆ ಈ ಪೋಲಿಂಗ್​ನಲ್ಲಿ ಎಲಾನ್​ ಮಸ್ಕ್​ಗೆ ವಿರುದ್ಧವಾಗಿಯೇ ಮತ ಚಲಾವಣೆ ಆಗಿದ್ದು, ಅವರು ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

    ಸುಮಾರು 16 ಗಂಟೆಗಳ ಹಿಂದೆ ಟ್ವಿಟರ್​ನಲ್ಲಿ ಪೋಲ್ ಕ್ರಿಯೇಟ್ ಮಾಡಿದ್ದ ಎಲಾನ್ ಮಸ್ಕ್​, ‘ನಾನು ಟ್ವಿಟರ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕಾ? ಮತಗಳ ಫಲಿತಾಂಶದ ಪ್ರಕಾರವೇ ನಾನು ನಡೆದುಕೊಳ್ಳುತ್ತೇನೆ’ ಎಂದು ಹೇಳಿ ಹೌದು ಅಥವಾ ಇಲ್ಲ ಎಂಬ ಆಯ್ಕೆ ಕೊಟ್ಟು ಮತ ಚಲಾಯಿಸಲು ಹೇಳಿದ್ದರು.

    ಆ ಪೋಲಿಂಗ್ ಮುಗಿದಿದ್ದು, ಅಂತಿಮ ಫಲಿತಾಂಶದಲ್ಲಿ ಹೌದು ಎಂಬುದಕ್ಕೇ ಹೆಚ್ಚಿನ ಮತ ಚಲಾವಣೆ ಆಗಿದೆ. ಅಂದರೆ ಈ ಪೋಲಿಂಗ್​ಗೆ 1,75,02,391 ಮತ ಚಲಾವಣೆ ಆಗಿದ್ದು, ಆ ಪೈಕಿ ಶೇ. 57.5 ಮಂದಿ ಎಲಾನ್ ಮಸ್ಕ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದರೆ, ಶೇ. 42.5 ಮಂದಿ ಬೇಡ ಎಂದಿದ್ದಾರೆ. ಮತದ ಫಲಿತಾಂಶದ ಪ್ರಕಾರವೇ ನಡೆದುಕೊಳ್ಳುತ್ತೇನೆ ಎಂದು ಎಲಾನ್ ಮಸ್ಕ್ ಹೇಳಿದ್ದರಿಂದ, ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಅವರು ಕೆಳಗಿಳಿದರೂ ಇಳಿಯಬಹುದು ಎನ್ನಲಾಗಿದೆ.

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts