More

    ಮೂರು ಕಾಡಾನೆ ಸಾವು; ಕರ್ತವ್ಯ ಲೋಪದ ಆರೋಪದ ಮೇರೆಗೆ ನಾಲ್ವರು ಅಧಿಕಾರಿಗಳ ಅಮಾನತು

    ರಾಯ್ಪುರ:  ವಾರದ ಆರಂಭದಲ್ಲಿ ಸಂಭವಿಸಿದ ಮೂರು ಆನೆಗಳ ಸಾವಿಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ಛತ್ತೀಸ್‌ಗಢ ಅರಣ್ಯ ಇಲಾಖೆ ಉಪ ವಿಭಾಗೀಯ ಅರಣ್ಯ ಅಧಿಕಾರಿ (ಎಸ್‌ಡಿಎಫ್‌ಒ) ಸೇರಿದಂತೆ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
    ಮಂಗಳವಾರ ಮತ್ತು ಗುರುವಾರದ ನಡುವೆ ಮೂರು ಹೆಣ್ಣು ಕಾಡಾನೆಗಳ ಶವಗಳು ಬಲರಾಂಪುರ ಮತ್ತು ಸೂರಜ್‌ಪುರ ಜಿಲ್ಲೆಯ ಕಾಡುಗಳಲ್ಲಿ ಪತ್ತೆಯಾಗಿದ್ದವು. ಈ ಮೂರೂ ಕಾಡಾನೆಗಳು ಒಂದೇ ಹಿಂಡಿನವಾಗಿದ್ದು, ಸುರ್ಗುಜಾ ಕಾಡುಗಳಲ್ಲಿ ಸುತ್ತಾಡುತ್ತಿದ್ದವು.

    ಇದನ್ನೂ ಓದಿ: ಭಕ್ತರ ಮೊರೆ ದೇವರಿಗೆ ಕೇಳಿಸಿತೆ? ಬಂದೇ ಬಿಟ್ಟಿತು ಗಂಟೆಗೆ ಸ್ವಯಂಚಾಲಿತ ಸಂವೇದಕ

    ಇಬ್ಬರು ಫಾರೆಸ್ಟ್ ರೇಂಜರ್‌ ಮತ್ತು ಓರ್ವ ಅರಣ್ಯ ರಕ್ಷಕನನ್ನು ಸಹ ಅಮಾನತುಗೊಳಿಸಲಾಗಿದೆ ”ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಬಲರಾಮ್​​ಪುರ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಗೂ ಶೋ ಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
    ಗುರುವಾರ ರಾಜ್ಯ ಅರಣ್ಯ ಸಚಿವ ಮೊಹಮ್ಮದ್ ಅಕ್ಬರ್ ಈ ವಿಷಯದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ತನಿಖೆಯ ನೇತೃತ್ವವನ್ನು ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ವಹಿಸಲಿದ್ದಾರೆ.

    ಇದನ್ನೂ ಓದಿ : ನಾವು ಮಲಗಿದಾಗ ಕರೊನಾ ವೈರಾಣು ಕೂಡ ಮಲಗುತ್ತದೆ… ಪಾಕ್​ ಧರ್ಮಬೋಧಕನ ಹೊಸ ವಿ…ಜ್ಞಾನ!

    ಗಣೇಶಪುರ ಅರಣ್ಯದಲ್ಲಿ ಮಂಗಳವಾರ ಮೊದಲು ಒಂದು ಆನೆ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಸತ್ತುಹೋಯಿತು. ಬುಧವಾರ ಅದೇ ರೀತಿ ಸಮಸ್ಯೆಯಿಂದ ಎರಡನೇ ಆನೆ ಅಸುನೀಗಿತು ಹಾಗೂ ಮೂರನೇ ಆನೆ ಸೋಂಕಿನಿಂದ ಸಾವನ್ನಪ್ಪದೆ ಎಂದು ಅರಣ್ಯ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. 

    ಉದುರುವ ಕೂದಲಿಂದ ಮದುವೆಯಾಗದೇ ನೊಂದು ಮೂರು ಮಹಡಿ ಏರಿದ ಪೇದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts