More

    ನೀರಾವರಿ‌ ನಿಗಮದ ಉದ್ಯೋಗಿಯೆಂದು ಎಲೆಕ್ಟ್ರಾನಿಕ್ ಯಂತ್ರ ಪಡೆದು ವಂಚನೆ: ಆರೋಪಿ ಸೆರೆ

    ಶಿವಮೊಗ್ಗ: ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮೋಸ ಮಾಡಿ ತೆಗೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು ಆತನಿಂದ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
    ಯುಟಿಪಿ ಕಾಲನಿಯ ನಾಗೇಶ್ (50) ಬಂಧಿತ ಆರೋಪಿ. ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಕಚೇರಿಯ ಶಿಕಾರಿಪುರದ ಉದ್ಯೋಗಿ ಎಂದು ಹೇಳಿಕೊಂಡಿದ್ದ ಈತ ನಕಲಿ ದಾಖಲೆಗಳನ್ನು ನೀಡಿ ದುರ್ಗಿಗುಡಿಯ ಇಮ್ಯಾಜಿನ್ ಟೆಕ್ನಾಲಜೀಸ್ ಮತ್ತು ವೆಂಕಟೇಶನಗರದ ಹೈಟೆಕ್ ಸೆಲ್ಯೂಷನ್ ಎಂಬ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ ಯಂತ್ರೋಪಕರಣ ತೆಗೆದುಕೊಂಡು ಹೋಗಿ ಮೋಸ ಮಾಡಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
    ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಉಮೇಶ್ ನಾಯ್ಕ್ ಮಾರ್ಗದರ್ಶನದಲ್ಲಿ ಕೋಟೆ ಸಿಪಿಐ ಟಿ.ಕೆ.ಚಂದ್ರಶೇಖರ್ ನೇತೃತ್ವದಲ್ಲಿ ಜಯನಗರ ಠಾಣೆ ಪಿಎಸ್ಐ ರಾಹತ್ ಆಲಿ ಹಾಗೂ ಸಿಬ್ಬಂದಿಗಳಾದ ಜ್ಯೋತಿ, ಸಿ.ಮಹೇಶ್, ಮೋಹನ್ ಕುಮಾರ್, ಚಂದನ್ ನಾಯ್ಕ್, ಪ್ರಕಾಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.
    ಆರೋಪಿಯಿಂದ 4.15 ಲಕ್ಷ ರೂ ಮೌಲ್ಯದ 2 ಜೆರಾಕ್ಸ್ ಮಷಿನ್, 5 ಪ್ರಿಂಟರ್, 2 ಯುಪಿಎಸ್ ಹಾಗೂ 6 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts