More

    ವಿದ್ಯುತ್​ ಗ್ರಾಹಕರಿಗೆ ಶಾಕ್​ ಮೇಲೆ ಶಾಕ್​: ನವೆಂಬರ್​ ಬೆನ್ನಲ್ಲೇ ಮತ್ತೆ ವಿದ್ಯುತ್​ ದರ ಹೆಚ್ಚಳ?

    ಬೆಂಗಳೂರು: ಹೊಸ ವರ್ಷದ ಖುಷಿಯ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಕಳೆದ ನವೆಂಬರ್​ನಲ್ಲಿ ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್​ಸಿ) ಇದೀಗ 5 ರಿಂದ 8 ಪೈಸೆ ಹೆಚ್ಚಳ ಮಾಡುವ ಮೂಲಕ ಮತ್ತೊಂದು ಶಾಕ್​ ನೀಡಲು ಮುಂದಾಗಿದೆ.

    ಇಷ್ಟೇ ಅಲ್ಲದೆ, ಮುಂದಿನ ಮೂರು ತಿಂಗಳಲ್ಲಿ ಮತ್ತೊಮ್ಮೆ ವಿದ್ಯುತ್‌ ದರ ಹೆಚ್ಚಳಕ್ಕೆ ಸಿದ್ಧತೆ ನಡೆಸುತ್ತಿರುವುದು ಮೂಲಗಳಿಂದ ತಿಳಿದುಬಂದಿದೆ. ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಎಷ್ಟು ದರ ಹೆಚ್ಚಳ ಮಾಡಬೇಕು ಎಂಬ ಕುರಿತು ಪ್ರಸ್ತಾವನೆ ಸಲ್ಲಿಸಲು ವಿವಿಧ ಎಸ್ಕಾಂಗಳಿಗೆ ಕೆಇಆರ್​ಸಿ ಸೂಚನೆ ನೀಡಿದೆ.

    ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಟೆಂಪೋ ಟ್ರಾವೆಲರ್​ ಪಲ್ಟಿ ಹೊಡೆದು ಮೂವರ ದುರ್ಮರಣ!

    ಕಳೆದ ವರ್ಷ ನವೆಂಬರ್​ನಲ್ಲಿ ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಿಸಲು ಕೆಇಆರ್​ಸಿ ಅನುಮತಿ ನೀಡಿತ್ತು. ಆದರೆ ಅದು ಸೀಮಿತ ಅವಧಿಗೆ ನೀಡಿದ ದರ ಏರಿಕೆಯಾಗಿತ್ತು. ಆದ್ದರಿಂದಲೇ ಈಗ ಮತ್ತೊಮ್ಮೆ ಪ್ರತಿ ಯೂನಿಟ್​ಗೆ 1.39 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳು ಸಿದ್ಧವಾಗುತ್ತಿವೆ. ಕರೊನಾ ಕಾರಣದಿಂದ ಎಸ್ಕಾಂಗಳು ಕೇಳಿದಷ್ಟು ದರ ಹೆಚ್ಚಿಸುವುದಕ್ಕೆ ಕೆಇಆರ್​ಸಿ ಒಪ್ಪಿರಲಿಲ್ಲ. ಆದರೆ ಹಿಂದಿನ ಪ್ರಸ್ತಾವನೆ ಬಾಕಿಯೂ ಸೇರಿ ಮುಂದಿನ 2 ವರ್ಷ ವಿದ್ಯುತ್ ದರ ಹೆಚ್ಚಳ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಇದರ ಜತೆಗೆ ಗ್ರಾಹಕರಿಂದ ವಸೂಲಿ ಮಾಡುವ ನಿಗದಿತ ಶುಲ್ಕವನ್ನೂ ಪ್ರತಿ ವರ್ಷ ಹೆಚ್ಚಿಸಲು ನಿರ್ಧರಿಸಲಾಗಿದೆ.

    2020ರ ಡಿ.23ರಂದು ಮತ್ತೊಂದು ಆದೇಶ ಮಾಡಿರುವ ಕೆಇಆರ್‌ಇಸಿ, ಇಂಧನ ವೆಚ್ಚ ಹೆಚ್ಚಳ ಹೊಂದಾಣಿಕೆ ಶುಲ್ಕ ವಿಧಿಸಲು ಅವಕಾಶ ಮಾಡಿಕೊಟ್ಟಿದೆ. ಇದರಂತೆ ಜ.1ರಿಂದ ಮಾ.31ರವರೆಗೆ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ 8 ಪೈಸೆ, ಮೆಸ್ಕಾಂ, ಸಿಇಎಸ್‌ಸಿ ವ್ಯಾಪ್ತಿಯಲ್ಲಿ ತಲಾ 5 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 4 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 5 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಸಾರ್ವಕಾಲಿಕ ಎತ್ತರಕ್ಕೆ ಪೆಟ್ರೋಲ್ ದರ; ದೆಹಲಿಯಲ್ಲಿ 23 ಪೈಸೆ ಏರಿಕೆ ಪ್ರತಿ ಲೀಟರ್ ಬೆಲೆ 84.20 ರೂ.

    5872 ಕೋಟಿ ರೂಪಾಯಿ ಹೊರೆ: ರಾಜ್ಯದ 5 ಎಸ್ಕಾಂಗಳು 5872 ಕೋಟಿ ರೂ.ಗಳ ಕೊರತೆ ಎದುರಿಸುತ್ತಿವೆ. ಆ ಹೊರೆಯನ್ನು ವಿದ್ಯುತ್ ದರ ಏರಿಕೆಯ ಮೂಲಕ ಭರಿಸಿಕೊಳ್ಳಲು ಮುಂದಾಗಿರುವುದಾಗಿ ಇಂಧನ ಇಲಾ ಖೆಯ ಮೂಲಗಳು ಖಚಿತ ಪಡಿಸಿವೆ.

    ರಾಜ್ಯಕ್ಕೆ ಮತ್ತೆ ಕರೆಂಟ್ ಶಾಕ್?; ಯೂನಿಟ್​ಗೆ 1.39 ರೂ. ಹೆಚ್ಚಳಕ್ಕೆ ಶೀಘ್ರ ಪ್ರಸ್ತಾವನೆ

    ನಡುರಸ್ತೆಯಲ್ಲಿ ದಂಡ ವಸೂಲಿಗೆ ತಡೆ: ವಾಹನ ಅಡ್ಡಗಟ್ಟುವುದಕ್ಕೆ ಬ್ರೇಕ್

    ಕಾಶ್ಮೀರದ ದಯನೀಯ ಸ್ಥಿತಿಗೆ ನೆಹರು, ಗಾಂಧಿ ಕಾರಣಕರ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts