More

    ಚುನಾವಣಾ ಬಾಂಡ್ ಎಂಬುದೇ ಅಸಂವಿಧಾನಿಕ

    ಶಿವಮೊಗ್ಗ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಚುನಾವಣಾ ಬಾಂಡ್ ಎಂಬುದೇ ಅಸಂವಿಧಾನಿಕವಾಗಿದ್ದು ಅದನ್ನು ಕೇಳುವ ಹಕ್ಕು ಚುನಾವಣಾ ಆಯೋಗಕ್ಕೆ ಇತ್ತು. ಆದರೆ ಇದುವರೆಗೆ ಕೇಳದೇ ಇರುವುದು ದುರ್ದೈವ ಎಂದು ಮಾಜಿ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ ಕಳವಳ ವ್ಯಕ್ತಪಡಿಸಿದರು.

    ನಗರದಲ್ಲಿ ಏರ್ಪಡಿಸಿದ್ದ ಹಿರಿಯ ವಕೀಲ ಜಿ.ಎಸ್.ನಾಗರಾಜ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರನ್ನು ದಿಢೀರ್ ನೇಮಕ ಮಾಡಲಾಯಿತು. ಅದರಲ್ಲಿ ಒಬ್ಬರು ರಾಜೀನಾಮೆ ನೀಡಿದರು. ಇದು ಯಾವುದೋ ಒಂದು ಪಕ್ಷದ ವಿಚಾರವಲ್ಲ. ಇದು ನಮ್ಮ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಚುನಾವಣಾ ಬಾಂಡ್ ಬಗ್ಗೆ ಯಾರೊಬ್ಬರೂ ಪ್ರಶ್ನೆ ಮಾಡುತ್ತಿಲ್ಲ ಎಂಬುದು ಅಚ್ಚರಿ ತರಿಸಿದೆ ಎಂದರು.
    ಇಂದು ಸಂವಿಧಾನದ ಆಶಯಗಳಿಗೆ ಬಹಳಷ್ಟು ಜನ ಬದ್ಧರಾಗಿಲ್ಲ. ಭಯ, ಆಸೆ, ಆಮಿಷ ಸೇರಿ ನಾನಾ ಕಾರಣಗಳಿಂದ ಅದರಾಚೆ ಉಳಿದಿದ್ದಾರೆ ಎಂಬುದು ಆತಂಕಕಾರಿಯಾಗಿದೆ. ಮಾಹಿತಿ ಹಕ್ಕು ಕಾಯ್ದೆ ಪವರ್‌ಫುಲ್ ಆಗಿದ್ದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಅದನ್ನು ವಕೀಲರು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

    ಇಂದು ರಾಜಕೀಯ ಎಂಬುದು ಕೊಳತೆ ನಾರುತ್ತಿದೆ. ಡರ್ಟಿ ಆಗಿದೆ. ಸಮಾಜದಲ್ಲಿ ವೈದ್ಯರು, ಶಿಕ್ಷಕರಿಗಿಂತ ವಕೀಲರಿಗೆ ಒಳ್ಳೆಯ ಸ್ಥಾನವಿದೆ. ವಕೀಲರು ಯಾವುದೇ ಒಂದು ಪಕ್ಷದ ವಕ್ತಾರರಲ್ಲ. ಹಿರಿಯ ವಕೀಲರಾಗಿದ್ದ ಪಾಲಿ ನಾರಿಮನ್ ವಿರುದ್ಧ ಮಾತನಾಡಲಿಕ್ಕೆ ಯಾವ ಸರ್ಕಾರಕ್ಕೂ ಧೈರ್ಯ ಇರಲಿಲ್ಲ. ಅದೇ ಮಾದರಿ ವಕೀಲರಾಗಿ ನಾಗರಾಜ್ ಅವರು ಕೆಲಸ ಮಾಡಿದ್ದಾರೆ.
    ಪ್ರೊ. ಬಿ.ಕೆ.ಚಂದ್ರಶೇಖರ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts