ಬೈಲಹೊಂಗಲ: ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಕರೆ ನೀಡಿದರು.
ಸಮೀಪದ ತಿಗಡಿ ಗ್ರಾಮದ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ವಿಸ್ತಾರವಾಗಿ, ಹೆಮ್ಮರವಾಗಿ ಬೆಳೆದ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿರುವುದು ನಮ್ಮ ಹೆಮ್ಮೆ. ಇಂಥ ಪಕ್ಷದಲ್ಲಿ ಕೆಲಸ ಮಾಡುವುದೇ ಭಾಗ್ಯದ ವಿಷಯ. ಆದಾಗ್ಯೂ ಚುನಾವಣೆಗಳಲ್ಲಿ ನಾವು ಮೈಮರೆಯದೇ ಚುರುಕಿನಿಂದ ಪಕ್ಷ ಸಂಘಟನೆ ಮಾಡಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ಪಕ್ಷ ಬಲವರ್ಧನೆಗೊಂಡರೆ ಕಾರ್ಯಕರ್ತರ ಆಸೆ, ಆಕಾಂಕ್ಷೆಗಳು ಅಧಿಕಾರ, ಜವಾಬ್ದಾರಿಯ ಕನಸುಗಳು ನನಸಾಗುತ್ತವೆ ಎಂದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಅವರು ಕಾರ್ಯ ವೈಖ್ಯರಿ ಹಾಗೂ ಕಾರ್ಯಕರ್ತರ ವಿಕಾಸ ಕುರಿತು ಮಾತನಾಡಿದರು. ಕಿತ್ತೂರ ಮಂಡಲ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಪ್ರಶಿಕ್ಷಣ ವರ್ಗದ ಸಂಚಾಲಕರಾದ ಬಿ.ಎಫ್.ಕೊಳದೂರ, ನಿಂಗನಗೌಡ ದೊಡ್ಡಗೌಡರ, ಮಲ್ಲಿಕಾರ್ಜುನ ಉಳ್ಳೆಗಡ್ಡಿ ಮಾತನಾಡಿದರು.
ಹಿರಿಯ ಬಿಜೆಪಿ ಮುಖಂಡರಾದ ಉಳವಪ್ಪ ಉಳ್ಳೆಗಡ್ಡಿ, ಬಸನಗೌಡ ಸಿದ್ರಾಮನಿ, ರೈತ ಮೋರ್ಚಾ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಕಿತ್ತೂರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಹನುಮಸಾಗರ, ಈರಣ್ಣ ವಾರದ, ಆನಂದ ಸಂಗೊಳ್ಳಿ ಇತರರು ಇದ್ದರು.