More

    ಮಸ್ಕಿಯಲ್ಲಿ ಗೆಲುವಿನ ನಗೆ ಬೀರಿದ ಆರ್.ಬಸನಗೌಡ ತುರ್ವಿಹಾಳ

    ಮಸ್ಕಿ: ಚುನಾವಣೆಯಲ್ಲಿ ಕ್ಷೇತ್ರದಿಂದ ಸತತ ಎರಡು ಬಾರಿಗೆ ಆರ್.ಬಸನಗೌಡ ತುರ್ವಿಹಾಳ ಅವರಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. ಮತ್ತೊಮ್ಮೆ ಬಿಜೆಪಿ ಪ್ರತಾಪಗೌಡಗೆ ಸೋಲಿನ ರುಚಿಯನ್ನು ಮತದಾರರು ತೋರಿಸಿದ್ದಾರೆ.

    ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ

    2018 ಸಾರ್ವತ್ರಿಕಕ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಪ್ರತಾಪಗೌಡ ಪಾಟೀಲ ಅಲ್ಪ ಮತದಿಂದ ಗೆದ್ದಿದ್ದರು. ಆಗ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    ಬಿಜೆಪಿಯಲ್ಲಿದ್ದ ಆರ್.ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು. 2021ರಲ್ಲಿ ಉಪ ಚುನಾವಣೆಯಲ್ಲಿ 30 ಸಾವಿರ ಅಧಿಕ ಮತಗಳ ಅಂತರದಿಂದ ಆರ್.ಬಸನಗೌಡ ತುರ್ವಿಹಾಳ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಭಧ್ರಕೋಟೆಯನ್ನು ರಕ್ಷಿಸಿದರು.

    ಇದನ್ನೂ ಓದಿ: ಕಾಂಗ್ರೆಸ್‌ಗೆ ಜೀವ ನೀಡಿದ ಜಯ

    ಈಗ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನ ಆರ್.ಬಸನಗೌಡ ತುರ್ವಿಹಾಳ 79,566 ಮತಗಳನ್ನು ಪಡೆದಿದ್ದಾರೆ. ಎದುರಾಳಿ ಬಿಜೆಪಿಯ ಪ್ರತಾಪಗೌಡ ಪಾಟೀಲ ಅವರನ್ನು 13 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರತಾಪಗೌಡ ಪಾಟೀಲ 66,513 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

    ಜೆಡಿಎಸ್ ಅಭ್ಯರ್ಥಿ ರಾಘವೇಂದ್ರ ನಾಯಕ ಕೇವಲ 1,906 ಮತಗಳನ್ನು ಪಡೆಯುವ ಮೂಲಕ ಪಕ್ಷಕ್ಕೆ ಅಸ್ತಿತ್ವ ಇಲ್ಲದಂತಾಗಿದೆ. ಕಣದಲ್ಲಿದ್ದ ಉಳಿದ ಪಕ್ಷೇತರ ಅಭ್ಯರ್ಥಿಗಳು 350 ಕ್ಕೂ ಹೆಚ್ಚು ಮತ ಪಡೆಯುವಲ್ಲಿ ವಿಫಲರಾಗಿದ್ದಾರೆ.

    ನಿಮ್ಮ ಮನೆ ಮಗನಾಗಿ ದುಡಿಯುತ್ತೇನೆ

    ಆರ್.ಬಸನಗೌಡ ತುರ್ವಿಹಾಳ ಅವರು ಕ್ಷೇತ್ರದ್ಯಂತ ಪ್ರಚಾರ ಸಭೆಗಳಲ್ಲಿ ಬಿಜೆಪಿ ಸರ್ಕಾರ ಮಸ್ಕಿ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಮೀನಮೇಷ ಏಣಿಸುತ್ತಿದೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನನ್ನನ್ನು ಗೆಲ್ಲಿಸಿದರೆ ನಿಮ್ಮ ಮನೆ ಮಗನಾಗಿ ದುಡಿಯುತ್ತೇನೆ ಎಂಬ ಮಾತುಗಳನ್ನಾಡಿದ್ದರು. ಇದು ಅನುಕಂಪ ಸೃಷ್ಟಿಸುವಲ್ಲಿ ಸಫಲರಾಗಿದ್ದು, ವಿಜಯುದ ನಗೆ ಬೀರಿದ್ದಾರೆ.

    ಆರ್.ಬಸನಗೌಡ ತುರ್ವಿಹಾಳ ಬಹುತೇಕವಾಗಿ ಮತದಾರರ ನಾಡಿಮಿಡಿತ ಅರಿತುಕೊಂಡು ನೇರವಾಗಿ ಮತದಾರರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಮುಖಂಡರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

    ಮಸ್ಕಿ ಪಟ್ಟಣ ಹೊರತು ಪಡಿಸಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಳೆದ ಬಾರಿ ಉಪಚುನಾವಣೆಯಲ್ಲಿ ಬಿಜೆಪಿ ಮಸ್ಕಿ ಪಟ್ಟಣದಲ್ಲಿ 4 ಸಾವಿರ ಮತಗಳ ಹಿನ್ನಡೆ ಅನುಭವಿಸಿತ್ತು. ಆರ್.ಬಸನಗೌಡ ತುರ್ವಿಹಾಳ ಮಿತಭಾಷಿ, ಸರಳ ವ್ಯಕ್ತಿತ್ವ ಅವರನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಮತದಾರರಿಗೆ ಮನವಿರಿಕೆ ಮಾಡಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಅವರ ಸಂಘನಾತ್ಮಕವ್ಯೆಹ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಸಿದ್ದನಗೌಡ ಮಾಟೂರು, ಮಲ್ಲನಗೌಡ ಗುಂಡ, ಮಲ್ಲಯ್ಯ ಬಳ್ಳಾ, ವೆಂಕಟರಡ್ಡಿ ಹಾಲಾಪುರ, ಸೇರಿದಂತೆ ಅನೇಕ ಮುಖಂಡರು ಆರ್.ಬಸನಗೌಡ ತುರ್ವಿಹಾಳ ಅವರನ್ನು ಗೆಲ್ಲಿಸುವಲ್ಲಿ ದಡ ಸೇರಿಸಿದ್ದಾರೆ. ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳು ಚದುರದಂತೆ ಕಾಂಗ್ರೆಸ್ ಮುಖಂಡರು ನೋಡಿಕೊಂಡಿರುವುದು ಚುನಾವಣೆಯಿಂದ ತಿಳಿಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts