More

    ಆರು ಏತ ನೀರಾವರಿ ಯೋಜನೆ ಅನುಷ್ಠಾನ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿಕೆ

    ಮಂಡ್ಯ: ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಆರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಯಿತು ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
    ತಾಲೂಕಿನ ದುದ್ದ ಹೋಬಳಿಯ ಬೇವುಕಲ್ಲು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಒಂದೊಂದು ಹೋಬಳಿಗೆ ಮೂರು ಸಬ್ ಸ್ಟೇಷನ್‌ಗಳನ್ನು ಮಾಡಲಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಯಾವುದು ಶಾಶ್ವತ ಅಲ್ಲ. ಆದರೆ ಒಳ್ಳೆಯ ನಡವಳಿಕೆ ಮುಖ್ಯ. ಹಾಗಾಗಿ ಯಾವುದೇ ಅಹಿತಕರ ನಡವಳಿಕೆ ಯಾರಿಗೂ ಬೇಡ ಎಂದು ತಿಳಿಸಿದರು.
    ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಸತ್ಯ. ನಿಮ್ಮ ಮನೆಯ ಮಗ ಸಿ.ಎಸ್.ಪುಟ್ಟರಾಜು ಅವರು ಆ ಸರ್ಕಾರದಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಅತಿಹೆಚ್ಚಿನ ಪ್ರಚಂಡ ಬಹುಮತದಿಂದ ಗೆಲ್ಲಲು ದುದ್ದ ಹೋಬಳಿ ಸಾಕ್ಷಿ ಆಗಬೇಕು. ದುದ್ದ ಹೋಬಳಿಯೊಂದಿಗೆ ನನಗೆ ವಿಶೇಷವಾದ ನಂಟಿದ್ದು, ಹೋಬಳಿಯ ಜನತೆಯ ಋಣ ನನ್ನ ಮೇಲಿದೆ. ಈಗಾಗಲೇ ಈ ಭಾಗದ 54 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ 20ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಆ ಕೆಲಸ ನಿರಂತರವಾಗಿ ಆಗಲು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
    ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿ, ದುದ್ದ ಹೋಬಳಿಯ ಹಳ್ಳಿಗಳಿಗೆ ಹೇಮಾವತಿ ಹಾಗೂ ಕಾವೇರಿ ನೀರು ಹರಿಸಲು ಸಿ.ಎಸ್.ಪುಟ್ಟರಾಜು ಶ್ರಮ ವಹಿಸಿದ್ದಾರೆ. ಇಂತಹ ಅಭಿವೃದ್ಧಿಪರ ಚಿಂತನೆ ಮಾಡುವ ಶಾಸಕರು ನಮಗೆ ಬೇಕು. ಎಚ್ಡಿಕೆ ಅವರ ಸರ್ಕಾರದಲ್ಲಿ ಪುಟ್ಟರಾಜು ಅವರನ್ನು ಮತ್ತೊಮ್ಮೆ ಮಂತ್ರಿಯಾಗಿ ನೋಡಲು ಅತಿ ಹೆಚ್ಚು ಮತಗಳನ್ನು ಕೊಟ್ಟು ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ವಿಶ್ವೇಶ್ವರಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಮಲ್ಲೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ.ಬೆಟ್ಟಸ್ವಾಮಿ, ಮುಖಂಡರಾದ ಶಿವಲಿಂಗಪ್ಪ, ಸಿ.ಬಸವರಾಜ, ಸುರೇಶ್, ಹೊಳಲು ಯೋಗೇಶ್, ಎಂ.ಮಾದೇಗೌಡ ಇತರರಿದ್ದರು.
    ಗ್ರಾಮಕ್ಕೆ ಆಗಮಿಸಿದ ಪುಟ್ಟರಾಜು ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸ್ವಾಗತಿಸಿದರು. ವಿವಿಧ ಜಾನಪದ ಕಲಾತಂಡಗಳು ಸಾಥ್ ನೀಡಿದವು. ವಿವಿಧ ಹಾರಗಳನ್ನು ಹಾಕಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಜೆಡಿಎಸ್‌ನ ತತ್ವ ಸಿದ್ಧಾಂತ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಕಾರ್ಯವೈಖರಿ ಮೆಚ್ಚಿ ವಿವಿಧ ಪಕ್ಷದ ಮುಖಂಡರು ದಳಕ್ಕೆ ಸೇರ್ಪಡೆಯಾದರು. ಗ್ರಾಮದ ಜನತೆ ಚುನಾವಣೆ ಖರ್ಚಿಗಾಗಿ ದೇಣಿಗೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts