More

    ಸತ್ತವರ ಹೆಸರಲ್ಲಿ ಮತದಾನಕ್ಕೆ ಯತ್ನ!

    ರೋಣ: ಸತ್ತವರ ಹೆಸರಿನಲ್ಲಿ ಮತದಾನ ಮಾಡಲು ಬಂದಿದ್ದು ಗೊತಾಗುತ್ತಿದ್ದಂತೆ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ವಣವಾದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದ ರಾಜ್ಯ ಬೀಜ ನಿಗಮ ಮಂಡಳಿಗೆ ಬೀಜೋತ್ಪಾದಕ ಷೇರುದಾರರ ಪ್ರತಿನಿಧಿ ಚುನಾವಣೆ ವೇಳೆ ನಡೆದಿದೆ.

    ಅಸಹಾಯಕರು, ವಿಕಲಚೇತನರಿಗೆ ಪ್ರಾಕ್ಸಿ ಮತದಾನಕ್ಕೆ (ಬದಲಿ ಪ್ರತಿನಿಧಿ) ಅವಕಾಶ ಇರುವುದನ್ನು ಕೆಲವರು ದುರುಪಯೋಗ ಪಡಿಸಿಕೊಂಡು ಸತ್ತವರ ಹೆಸರಿನಲ್ಲಿ ನಕಲಿ ಪ್ರಾಕ್ಸಿ ಸೃಷ್ಟಿಸಿಕೊಂಡು ಮತದಾನ ಮಾಡಲು ಬಂದಿದ್ದರು. ಈ ವಿಷಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆದು ಮತದಾನ ಮಾಡಲು ಬಂದಿದ್ದ ವ್ಯಕ್ತಿಯನ್ನು ಹೊರದಬ್ಬಲಾಯಿತು.

    ಈ ವೇಳೆ ಮತದಾನ ಕೇಂದ್ರಕ್ಕೆ ಆಗಮಿಸಿದ ಮಾಜಿ ಶಾಸಕ ಜಿ.ಎಸ್. ಪಾಟೀಲ, ನಕಲಿ ಮತದಾನ ಮಾಡುತ್ತಿರುವವರು ಯಾರೇ ಇರಲಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಚುನಾವಣೆ ಆಧಿಕಾರಿ ಡಾ.ವಿಶ್ವನಾಥ್ ಅವರಿಗೆ ತಾಕೀತು ಮಾಡಿದರು.

    834 ಮತದಾರರ ಪೈಕಿ 564 ಮತದಾರರು ಮತ ಚಲಾವಣೆ ಮಾಡಿದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ಶಾಸಕರಾದ ಜಿ.ಎಸ್. ಪಾಟೀಲ, ಶ್ರೀಶೈಲಪ್ಪ ಬಿದರೂರ, ಧಾರವಾಡ ಕೆಎಂಎಫ್ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ ಸೇರಿದಂತೆ ಅನೇಕ ಘಟಾನುಘಟಿ ಮತದಾರರನ್ನು ಹೊಂದಿರುವ ಈ ಕೇತ್ರಕ್ಕೆ ಕಳೆದ 25 ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ರೋಣ ಪಟ್ಟಣದ ಆಯ್.ಎಸ್. ಪಾಟೀಲ ಕಳೆದ ಐದು ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದರು.

    ಆದರೆ, ಈ ಬಾರಿ ಪಾಟೀಲ ಮನೆತನದ ಗರಡಿಯಲ್ಲಿ ಪಳಗಿದ ತಾಲೂಕಿನ ಸೂಡಿ ಗ್ರಾಮದ ಶಿವಬಸಪ್ಪ ಬೆಲ್ಲದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಚುನಾವಣೆಯ ಕಣ ರಂಗೇರುವಂತೆ ಮಾಡಿದ್ದರು.

    ಸೂಕ್ತ ಪೊಲೀಸ್ ಬಂದೋಬಸ್ತ್: ಚುನಾವಣೆ ಅಂಗವಾಗಿ ನರಗುಂದ ಡಿವೈಎಸ್​ಪಿ ಶಂಕರ ರಾಗಿ, ರೋಣ ಸಿಪಿಐ ಸುನೀಲ ಸೌದಿ ಸೇರಿದಂತೆ ರೋಣ, ಗಜೇಂದ್ರಗಡ, ನರೇಗಲ್ ಠಾಣೆಯ ಪಿಎಸ್​ಐಗಳ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts