More

    ಚುನಾವಣೆ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಿ

    ಗಂಗಾವತಿ: ಶ್ರೀರಾಮನಗರದ ವಾರದ ಸಂತೆಯಲ್ಲಿ ಗ್ರಾಪಂಯಿಂದ ಮತದಾನದ ಮಹತ್ವ ಕುರಿತು ಶನಿವಾರ ಜಾಗೃತಿ ಮೂಡಿಸಲಾಯಿತು.


    ಪಿಡಿಒ ವತ್ಸಲಾ ಮಾತನಾಡಿ, ಚುನಾವಣೆ ಹಬ್ಬದಲ್ಲಿ ಪ್ರತಿಯೊಬ್ಬರೂ ಸಂಭ್ರಮದಿಂದ ತೊಡಗಿಸಿಕೊಳ್ಳಬೇಕಿದ್ದು, ಶೇ.100 ಮತದಾನಕ್ಕೆ ಅದ್ಯತೆ ನೀಡಬೇಕು. ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಕಳೆದ ಚುನಾವಣೆಯಲ್ಲಿ ಶ್ರೀ ರಾಮನಗರದಲ್ಲಿ ಕಡಿಮೆ ಮತದಾನ ಆಗಿತ್ತು. ಈ ಬಾರಿ ಪ್ರತಿಯೊಬ್ಬರೂ ಹಕ್ಕು ಚಲಾಯಿಸಬೇಕು ಎಂದರು. ಗ್ರಾಪಂ ಕಾರ್ಯದರ್ಶಿ ಗಂಗಣ್ಣ, ಲೆಕ್ಕಾಧಿಕಾರಿ ಜೂರಟಗಿ ಗಿರಿಧರ, ಸಿಬ್ಬಂದಿ ಮಹೇಶ, ಪವನ ಕುಮಾರ, ಅನ್ನಪೂರ್ಣ, ನೀಲಪ್ಪ, ರಾಘವೇಂದ್ರ, ನಾಗರಾಜ ಇತರರಿದ್ದರು.

    ಇಂದರಗಿ ತಾಲೂಕು ಗಡಿಭಾಗದಲ್ಲಿ ಜಾಗೃತಿ ಪಥಸಂಚಲನ

    ಇಂದರಗಿ: ತಾಲೂಕಿನ ಗಡಿಭಾಗ ಇಂದರಗಿಯಲ್ಲಿ ಐಟಿಬಿಪಿ ಯೋಧರಿಂದ ಜಾಗೃತಿ ಪಥಸಂಚಲನ ನಡೆಯಿತು. ಶಾಂತಿಯುತ ಮತದಾನಕ್ಕಾಗಿ ಸೂಕ್ತ ಬಂದೋಬಸ್ತ್ ಆಯೋಜಿಸಲಾಗುತ್ತಿದ್ದು, ಯೋಧರು ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆ ಪಿಐ ಡಿ.ಆಂಜನೇಯ ಹೇಳಿದರು. ಯೋಧರನ್ನು ಪುಷ್ಪಾರ್ಪಣೆ ಮೂಲಕ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಭೋವಿ, ಸದಸ್ಯರಾದ ಗವಿಸಿದ್ದಪ್ಪ ಹಾವರಗಿ, ನಾಗರಾಜ ಕಂಬಳಿ,ಅಮರೇಶ ,ಮುಖಂಡರಾದ ಪಂಪಣ್ಣ ಕುಂಬಾರ ದಳಪತಿ, ಅಮರೇಶ ಕುಂಬಾರ, ಆದೆಪ್ಪ ಬೇಟಗೇರಿ ಇತರರಿದ್ದರು.

    ಇದನ್ನೂ ಓದಿ : https://www.vijayavani.net/gangavati-has-given-opportunity-to-unpleasant-events/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts