More

    ಸೌಕರ್ಯ ನೀಡದ್ದಕ್ಕೆ ಮತದಾನ ಬಹಿಷ್ಕಾರ: ವಿವೇಕಾನಂದನಗರ ಬಡಾವಣೆ ನಿವಾಸಿ ಕೀಲಾರ ಕೃಷ್ಣ ಎಚ್ಚರಿಕೆ

    ಮಂಡ್ಯ: ನಗರದ ಚಿಕ್ಕಮಂಡ್ಯ ಕೆರೆಯಂಗಳದ ವಿವೇಕಾನಂದ ಬಡಾವಣೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಈ ಬಾರಿಯ ವಿಧಾನಸಭೆ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡಲಿದ್ದೇವೆಂದು ವಿವೇಕಾನಂದ ನಗರದ ಬಡಾವಣೆ ನಿವಾಸಿಗಳ ಸಂಘದ ಸದಸ್ಯ ಕೀಲಾರ ಕೃಷ್ಣ ತಿಳಿಸಿದರು.
    ಬಡಾವಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚರಂಡಿ, ಯುಜಿಡಿ, ರಸ್ತೆ, ಬೀದಿ ದೀಪಗಳ ಸೌಲಭ್ಯಗಳಿಲ್ಲ. ಚಿರತೆ, ನಾಯಿಗಳ ಹಾವಳಿ ಹೆಚ್ಚಾಗಿದೆ. ಕಸವನ್ನು ಸಂಗ್ರಹಿಸಲು ನಗರಸಭೆ ವಾಹನಗಳು ಬರುತ್ತಿಲ್ಲ. ಇದರಿಂದಾಗಿ ಅಲ್ಲಿ ಬದುಕುವುದೇ ಕಷ್ಟವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
    ಸರ್ಕಾರದ ನಿರ್ದೇಶನದಂತೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ 1998ರಲ್ಲಿ ವಿವೇಕಾನಂದ ನಗರ ಎಂಬ ಬಡಾವಣೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಸುಮಾರು 2800 ನಿವೇಶನ ನೀಡಿದೆ. ಈ ಬಡಾವಣೆಯಲ್ಲಿ ಈಗ 500 ರಿಂದ 600 ಮನೆಗಳಿವೆ. ಆದರೆ ಮೂಲ ಸೌಕರ್ಯವಾದ ಕುಡಿಯುವ ನೀರು, ಯುಜಿಡಿ, ಚರಂಡಿ, ವಿದ್ಯುತ್ ದೀಪ ಹಾಗೂ ರಸ್ತೆಗಳಿಗೆ ಕ್ರಾಸ್ ಮತ್ತು ಹೆಸರುಗಳನ್ನಿಟ್ಟಿಲ್ಲ. ಉದ್ಯಾನವನಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿಲ್ಲ. ನಗರಸಭೆಯೂ ಬಡಾವಣೆಯ ಕಸವನ್ನು ವಿಲೇವಾರಿ ಮಾಡಲು ಕಸದ ವಾಹನವನ್ನು ಕಳುಹಿಸದ ಪರಿಣಾಮ ಕಂಡ ಕಂಡ ಕಡೆಗಳೆಲ್ಲಾ ತ್ಯಾಜ್ಯ ವಸ್ತುಗಳನ್ನು ಬಿಸಾಡುವಂತಾಗಿದೆ. ಇದರಿಂದ ಬೀದಿ ನಾಯಿಗಳ ಹಾವಳಿ ಬಡಾವಣೆಯಲ್ಲಿ ಹೆಚ್ಚಾಗಿದೆ ಎಂದು ದೂರಿದರು.
    ಈ ಎಲ್ಲ ಸಮಸ್ಯೆಗಳ ಬಗ್ಗೆ ಬಡಾವಣೆಯ ನಿವಾಸಿಗಳು ಸುಮಾರು 20 ವರ್ಷದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳಿಗೆ ಪತ್ರ ಮುಖೇನ ಹಾಗೂ ಖುದ್ದಾಗಿ ಕೇಳಿಕೊಂಡರೂ ಸಹ ಅವರು ನಿವೇಶನಕ್ಕೆ ಮೂಲ ಸೌಕರ್ಯವನ್ನು ಕಲ್ಪಿಸಿಕೊಡದೆ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿದರು.
    ಸದಸ್ಯರಾದ ಭೀಮೇಶ್, ಶಿವಪ್ರಕಾಶ್, ಚಂದ್ರು, ಪುಟ್ಟೇಗೌಡ, ಶ್ರೀನಿವಾಸ್, ರಾಜು, ಟಿ.ರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts