More

    ಚುನಾವಣೆ ಯಲ್ಲಿ ಉತ್ತಮ ನಾಯಕರ ಆಯ್ಕೆ ಜನರ ಜವಾಬ್ದಾರಿ


    ಚನ್ನಗಿರಿ: ಚುನಾವಣೆ ಯಲ್ಲಿ ಮತದಾನ ಪ್ರಜೆಗಳ ಮೂಲಭೂತ ಹಕ್ಕು. ಯಾವುದೇ ಆಮಿಷಕ್ಕೆ ಒಳಗಾಗದೆ, ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದು ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ಜಿ.ಎಂ. ನರೇಂದ್ರ ತಿಳಿಸಿದರು.

    ತಾಲೂಕು ಆಡಳಿತ, ಪುರಸಭೆ ಮತ್ತು ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಜಾಗೃತಿ ಆಂದೋಲನದಲ್ಲಿ ಮಾತನಾಡಿದರು.

    ಪ್ರತಿ ಐದು ವರ್ಷಕ್ಕೆ ಒಂದು ಬಾರಿ ನಡೆಯುವ ಚುನಾವಣೆಯಲ್ಲಿ ನಮ್ಮನ್ನು ಆಳುವ ನಾಯಕನನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.

    ನಿಮ್ಮ ನಾಯಕ ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಇರಬೇಕು. ಜನರು ಅಕ್ಷರಸ್ಥರಾಗುತ್ತಿದ್ದರೂ ಮತದಾನದಲ್ಲಿ ಹಿಂದೆ ಉಳಿದಿದ್ದಾರೆ. ಚುನಾವಣ ಆಯೋಗ ಮತದಾನ ಜಾಗೃತಿ ಮೂಡಿಸುತ್ತಿದ್ದರೂ ಜನರು ತಮ್ಮ ಹಕ್ಕು ಚಲಾವಣೆ ಮಾಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಮತ ಚಲಾಯಿಸುವುದು ನಿಮ್ಮ ಕರ್ತವ್ಯವಾಗಿದೆ. ನೂರರಷ್ಟು ಕಡ್ಡಾಯ ಮತದಾನ ಗುರಿಯಾಗಬೇಕು ಎಂದರು.

    ಪುರಸಭೆ ಮುಖ್ಯಾಧಿಕಾರಿ ಕೆ. ಪರಮೇಶ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಭಾರತದ ಪ್ರತಿ ಪ್ರಜೆ ಮತದಾರರ ಗುರುತಿನ ಚೀಟಿ ಪಡೆದು ಯೋಗ್ಯ ವ್ಯಕ್ತಿಗಳಿಗೆ ಮತ ನೀಡಬೇಕು ಎಂದರು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಆಂದೋಲನ ನಡೆಯಿತು.

    ಪುರಸಭೆ ಆರೋಗ್ಯಾಧಿಕಾರಿ ಶಿವರುದ್ರಪ್ಪ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗರಾಜ್ ನಾಡಿಗ್, ಖಜಾಂಚಿ ಸಿ.ವಿ.ಸುಮತೀಂದ್ರ, ಜ್ಯೋತಿಪ್ರಸಾದ್, ಜೆ.ಶಿವಕುಮಾರ್, ಎಂ.ಬಿ. ರವಿ, ಮುಕೇಶ್, ನವೀನ್, ದೀಪಕ್, ಪಿ.ಜೆ.ಚೇತನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts