More

    ಮೊಟ್ಟೆಗೆ ಡಿಮಾಂಡ್, ದರ ಗಗನಕ್ಕೆ

    ಉಡುಪಿ: ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ, ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರ ಏರಿಕೆ ಕಂಡಿದೆ. ಬಹುತೇಕ ಚಿಲ್ಲರೆ ಅಂಗಡಿಗಳಲ್ಲಿ ೭ ರೂ.ಗೆ ಮಾರಾಟವಾಗುತ್ತಿದೆ. ಹೊರಜಿಲ್ಲೆಗಳಿಂದ ಪ್ರತಿನಿತ್ಯ ೭ ಲಕ್ಷ ಮೊಟ್ಟೆಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಮೊಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ.
    ಲಾಕ್‌ಡೌನ್ ಮತ್ತು ಮೀನುಗಾರಿಕೆ ರಜೆ ಹಿನ್ನೆಲೆಯಲ್ಲಿ ಮೊಟ್ಟೆಗೆ ಡಿಮಾಂಡ್ ಹೆಚ್ಚಿದೆ. ಗರಿಷ್ಠ ಪ್ರಮಾಣದಲ್ಲಿ ಪ್ರೊಟೀನ್ ಅಂಶವಿರುವ ಕಾರಣಕ್ಕೆ ಜನರು ಮೊಟ್ಟೆ ಸೇವಿಸುತ್ತಿದ್ದಾರೆ. ಜಿಲ್ಲೆಗೆ ತಮಿಳುನಾಡಿನ ಸೇಲಂ, ಮೈಸೂರು, ಬೆಂಗಳೂರು, ಬಳ್ಳಾರಿಯಿಂದ ಮೊಟ್ಟೆ ಪೂರೈಕೆಯಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಮೇ ತಿಂಗಳ ಪ್ರಾರಂಭದಲ್ಲಿ ೧೦೦ ಮೊಟ್ಟೆಗಳ ಲೈನ್ ಸೇಲ್ಸ್ ದರ ೪೮೦, ಸೊಸೈಟಿ ದರ ೪೩೦ ರೂ. ಇತ್ತು. ಪ್ರಸ್ತುತ ೧೦೦ ಮೊಟ್ಟೆ ಲೈನ್ ದರ ೫೭೦ ರೂ.ಇದ್ದು, ಸೊಸೈಟಿ ದರ ೫೪೦ ರೂ.ಗೆ ಏರಿದೆ. ಒಂದು ಮೊಟ್ಟೆಗೆ ಹೋಲ್‌ಸೇಲ್‌ನಲ್ಲಿದ್ದ ೪.೮೦ ರೂ, ದರ ೫.೭೮ ರೂ, ಗೆ ಏರಿದೆ. ಮಾರುಕಟ್ಟೆ ಬೆಲೆ ೬ ರೂ, ೬.೫೦ ಪೈಸೆ ರೂ.ಇದ್ದು, ಚಿಲ್ಲರೆ ಅಂಗಡಿಗಳಲ್ಲಿ ೭ ರೂ.ಇದೆ.
    ಜಿಲ್ಲೆಯಲ್ಲಿ ೧೦೫ ಕೋಳಿ ಫಾರಂಗಳಿವೆ ಎಂದು ಜಿಲ್ಲೆಯ ಪಶುಸಂಗೋಪಾನಾ ಇಲಾಖೆ ಉಪನಿರ್ದೇಶಕ ಉಪನಿರ್ದೇಶಕ ಡಾ.ಹರೀಶ್ ತಮನ್ಕರ್ ವಿಜಯವಾಣಿಗೆ ತಿಳಿಸಿದ್ದಾರೆ. ಮೊಟ್ಟೆಯ ಉದ್ದೇಶಕ್ಕೆ ೪ ಫಾರಂಗಳಲ್ಲಿದ್ದು, ೮೭,೧೫೦ ಕೋಳಿಗಳನ್ನು ಸಾಕಲಾಗುತ್ತಿದೆ. ಜಿಲ್ಲೆಯಲ್ಲಿ ಮೊಟ್ಟೆಯ ಬೇಡಿಕೆ ಹಿಂದಿಗಿಂತ ಮೂರುಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ ಬೇಡಿಕೆಯಂತೆ ನಿತ್ಯ ಹೊರ ಜಿಲ್ಲೆಗಳಿಂದ ೭ ಲಕ್ಷ ರೂ.ಮೌಲ್ಯದ ಮೊಟ್ಟೆಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೆಚ್ಚಳ:  ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೊಟ್ಟೆ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ೬.೫೦ ರೂ.ಗೆ ಏರಿಕೆಯಾಗಿದೆ. ರಖಂ ದರ ೬ ರೂ. ಇದೆ. ಪ್ರೊಟೀನ್ ಅಂಶಕ್ಕಾಗಿ ಜನರು ಮೊಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನನುತ್ತಿದ್ದಾರೆ. ಮೇ ಆರಂಭದಿಂದ ಮೊಟ್ಟೆ ದರ ಏರಿಕೆ ಹಾದಿಯಲ್ಲಿ ಸಾಗಿದೆ. ಮೇ ೧ರಂದು ಚಿಲ್ಲರೆ ಮಾರುಕಟ್ಟೆಯಲ್ಲಿ ೫ ರೂ.ಇದ್ದ ದರ ಜೂನ್ ೧ಕ್ಕೆ ೬.೫೦ಕ್ಕೆ ತಲುಪಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts