More

    ಕಲ್ಯಾಣವನ್ನು ಶೈಕ್ಷಣಿಕವಾಗಿ ಅಭಿವದ್ಧಿಗೊಳಿಸಲು ಶ್ರಮ

    ಜೇವರ್ಗಿ: ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಭರವಸೆ ನೀಡಿದರು.

    ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಸಂಘದಿAದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಆದರ್ಶ ಗುರುವರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ರೂಪರೇಷೆಗಳನ್ನು ಹಾಕಿಕೊಳ್ಳಬೇಕು. ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.

    ನಿರಗುಡಿಯ ಶ್ರೀ ಹವಾಮಲ್ಲಿನಾಥ ಮಹಾರಾಜ ಮಾತನಾಡಿ, ಶಿಕ್ಷಕರು ಶ್ರೇಷ್ಠ ಸಮುದಾಯದ ನಿರ್ಮಾತೃಗಳಾಗಿದ್ದು, ಭಾವೈಕ್ಯತೆ ಸಂದೇಶ ಸಾರುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

    ಮಳಖೇಡದ ಹಜರತ್ ಸೈಯ್ಯದ್ ಶಹಾ ಮುಸ್ತಫಾ ಖಾದ್ರಿ, ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸುರಪುರದ ಫಾದರ್ ಫಿಲೀಪ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ, ಪ್ರಮುಖರಾದ ರಾಮಚಂದ್ರ ಜಾಧವ್, ವಿಠ್ಠಲ್ ಜಾಧವ್, ರಾಜಶೇಖರ ಸೀರಿ, ಶಾಂತಪ್ಪ ಕೂಡಲಗಿ, ವಿಜಯಕುಮಾರ ಹಿರೇಮಠ, ಬಹದ್ದೂರ್ ರಾಠೋಡ್, ಪ್ರಭು ಜಾಧವ್, ವೈಜನಾಥ ಜಳಕಿ, ಧನರಾಜ ರಾಠೋಡ್ ಮುತ್ತಕೋಡ, ಅಲ್ಲಾವುದ್ದೀನ್ ಸಾಗರ, ಜಗದೀಶ ಉಕ್ಕಿನಾಳ, ಜ್ಯೋತಿ ಸಾಲಿಮಠ, ಗುರುಶಾಂತಪ್ಪ ಚಿಂಚೋಳಿ, ಭೀಮರಾವ ಗಂವ್ಹಾರ್, ಶಿವಶರಣಯ್ಯ ಚತುರಾಚಾರಿಮಠ, ವಿದ್ಯಾಶ್ರೀ ಪಾಟೀಲ್, ಷಣ್ಮುಖಪ್ಪ ರಾಸಣಗಿ ಇತರರಿದ್ದರು.

    ಉಪನ್ಯಾಸಕ ಡಾ.ಕರಿಗೂಳೇಶ್ವರ ಉಪನ್ಯಾಸ ನೀಡಿದರು. ಪ್ರಾಚಾರ್ಯ ವೆಂಕಟರಾವ್ ಎಂ., ಸಹ ಶಿಕ್ಷಕಿ ಯಲ್ಲುಬಾಯಿ ಲೊಕ್ರೇ, ಸಿಸ್ಟರ್ ಲಿನೆಟ್ ಸಿಕ್ವೇರಾ ಚಿತ್ತಾಪುರ, ರೂಪಾ ಪಾಟೀಲ್ ಯಾದಗಿರಿ, ಶ್ರೀಕಾಂತ ಪಾಟೀಲ್ ಅವರಿಗೆ ರಾಜ್ಯ ಮಟ್ಟದ ಗುರುವರ್ಯ ಪ್ರಶಸ್ತಿ ಜತೆಗೆ ತಲಾ 5 ಸಾವಿರ ರೂ., ಸಿರಿ ಧಾನ್ಯ ಕಿಟ್ ನೀಡಿ ಸತ್ಕರಿಸಲಾಯಿತು.

    ಸರ್ವಧರ್ಮದ ಗುರುಗಳ ಸಮಾಗಮ: ನವ ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಸಂಘದಿAದ ಆಯೋಜಿಸಿದ್ದ ರಾಜ್ಯ ಮಟ್ಟದ ಆದರ್ಶ ಗುರುವರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿಂದು, ಮುಸ್ಲಿಂ, ಕ್ರೆÊಸ್ತ ಸೇರಿ ಸರ್ವಧರ್ಮ ಗುರುಗಳು ಭಾಗವಹಿಸುವ ಮೂಲಕ ಜಾತ್ಯತೀತ ತತ್ವ ಬಿಂಬಿಸಿತು. ಇದಲ್ಲದೆ ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಹಾಗೂ ಬೋಧಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts