More

    ಮೀಸಲಾತಿ ಪ್ರತಿಪಕ್ಷಗಳಿಗೇಕೆ ಆತುರ? ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯಿತ್ತು. ಹಿಂದುಳಿದ ವರ್ಗಗಳಿಗೆ ಸಮಸ್ಯೆಯಾಗಬರದು ಎಂಬ ಕಾರಣಕ್ಕೆ 2ಡಿ ಹಾಗೂ ಒಕ್ಕಲಿಗ ಸಮುದಾಯವನ್ನು 2ಸಿ ಗೆ ಸೇರಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮೊದಲ ಹೆಜ್ಜೆ. ಪ್ರತಿಪಕ್ಷಗಳು ಈಗಲೇ ಅಪಸ್ವರ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಿಗೂ ತೊಂದರೆಯಾಗದಂತೆ ಮೀಸಲಾತಿ ಕಲ್ಪಿಸುವುದು ಸರ್ಕಾರದ ಉದ್ಧೇಶವಾಗಿದೆ. ಎಲ್ಲವೂ ಚರ್ಚೆಯ ಹಂತದಲ್ಲಿದೆ. ಯಾವುದೂ ಅಂತಿಮವಾಗಿಲ್ಲ. ಎರಡು ಪ್ರವರ್ಗಗಳನ್ನು ಮಾಡಲಾಗಿದೆ. ಪಂಚಮಸಾಲಿ ಸಮುದಾಯದಲ್ಲಿ ಸ್ವಲ್ಪ ಗೊಂದಲವಿದ್ದಂತಿದೆ. ಹೀಗಾಗಿ ಸಂಭ್ರಮಾಚಾರಣೆ, ವಿರೋಧದಿಂದ ದೂರವಿದ್ದಾರೆ. ಇದು ಸರಿಯಾಗಿದೆ ಎಂದರು.
    ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ನಮ್ಮೊಂದಿಗೆ ಸಹಕರಿಸಬೇಕು. ಸೂಕ್ತ ಸಲಹೆ ನೀಡಬೇಕು. ಏಕಕಾಲದಲ್ಲಿ ಎಲ್ಲವೂ ಆಗಬೇಕು ಎಂಬ ಒತ್ತಾಯ ಸರಿಯಲ್ಲ. ಯಾರಿಂದಲೂ ಜಾದೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.
    ಸಿದ್ದು ಸಿಎಂ ಆಗಿದ್ದು ನಮ್ಮ ಒಡಕಿನಿಂದ
    ಬಿಜೆಪಿ ಒಡೆದು ಕೆಜೆಪಿ ಅಸ್ತಿತ್ವಕ್ಕೆ ಬಾರದೇ ಇದ್ದರೆ ಸಿದ್ದರಾಮಯ್ಯ ಈ ಜನ್ಮದಲ್ಲಿ ಸಿಎಂ ಆಗುತ್ತಿರಲಿಲ್ಲ. ಯಡಿಯೂರಪ್ಪ ಅವರ ಫೋಟೋವನ್ನು ಮನೆಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಪೂಜೆ ಮಾಡಬೇಕು. ಬಿಜೆಪಿ ಒಡಕಿನಿಂದ ಕಾಂಗ್ರೆಸ್‌ಗೆ ಲಾಭವಾಗಿತ್ತು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
    ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಮಠಾಧೀಶರೊಬ್ಬರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ. ಸುಮ್ಮನೇ ಘೋಷಣೆ ಮಾಡುವುದೇಕೆ? ಸಿದ್ದರಾಮಯ್ಯ ಅವರನ್ನೇ ಕರೆದುಕೊಂಡು ಹೋಗಿ ಸಿಎಂ ಕುರ್ಚಿಯಲ್ಲಿ ಕೂರಿಸಲಿ ಎಂದು ಲೇವಡಿ ಮಾಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts