More

    ಶಿಕ್ಷಣದಿಂದ ಮಹಿಳಾ ಸಬಲೀಕರಣ: ನಾಗನಾಯಕನಹಟ್ಟಿಯಲ್ಲಿ ಡಾ.ಮಂಜುಳಾ ಪ್ರತಿಪಾದನೆ

    ಹಿರಿಯೂರು: ಶಿಕ್ಷಣ ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ದಾರಿ ದೀಪವಾಗಿದೆ ಎಂದು ಡಾ.ಮಂಜುಳಾ ಮೂರ್ತಿ ಹೇಳಿದರು.

    ನಗರದ ನಾಗನಾಯ್ಕನಹಟ್ಟಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ-ಹೋಳಿ ಉತ್ಸವದಲ್ಲಿ ಮಾತನಾಡಿದರು.

    ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅನಿವಾರ್ಯವಾಗಿದ್ದು, ಶಿಕ್ಷಣ ಜ್ಞಾನ-ಆತ್ಮಬಲ ಇಮ್ಮಡಿಗೊಳಿಸುತ್ತದೆ, ಸಾಧನೆಯ ಸಂಕಲ್ಪತೊಟ್ಟು ಆತ್ಮವಿಶ್ವಾಸದಿಂದ ದಿಟ್ಟ ಹೆಜ್ಜೆ ಹಾಕಿದಾಗ ಮಹಿಳಾ ಸಬಲೀಕರಣ ಸಾಧ್ಯ ಎಂದು ತಿಳಿಸಿದರು.

    ಸಮಾಜ ಸೇವಕಿ ವಿಜಯರಂಜಿನಿ ಮಾತನಾಡಿ, ಹೆಣ್ಣಿಂದ ಜಗತ್ತಿನ ಅಸ್ತಿತ್ವ ಉಳಿಯಲು ಸಾಧ್ಯ, ಜೀವನವೀಡಿ ಇನ್ನೊಬ್ಬರ ಬದುಕಿಗೆ ಬೆಳಕಾಗುವ ಮಹಿಳೆ ಜಗತ್ತಿನ ಕಣ್ಣು, ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಸವಾಲುಗಳನ್ನು ದೈರ್ಯವಾಗಿ ಮೆಟ್ಟಿ ನಿಂತು, ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಾಗಿದೆ ಎಂದರು.

    ಅರಣ್ಯ ಇಲಾಖೆ ಆರ್‌ಎಫ್‌ಒ ನಮಿತಾ, ಡಾ.ವಿದ್ಯಾಶ್ರೀ, ಶಿಕ್ಷಕಿ ಶಾಂತಾಬಾಯಿ, ಹೇಮಾ ಗುರುಚರಣ್, ವನಜಾಬಾಯಿ, ಸುಜಾತಾ, ಗಾಯತ್ರಿ, ನೇತ್ರಾವತಿ, ಪ್ರಿಯಾಂಕಾ, ಉಮಾದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts