More

    ಯಾವುದೇ ಮಕ್ಕಳಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ: ಶಿಕ್ಷಣ ಸಚಿವ ನಾಗೇಶ್​

    ಬೆಂಗಳೂರು: ಮಕ್ಕಳಿಗೆ ಕಳೆದ 20 ತಿಂಗಳಿಂದ ಶಿಕ್ಷಣದ ಕೊರತೆ ಉಂಟಾಗಿತ್ತು. ಸಿಎಂಗೆ ಶಾಲೆ ಆರಂಭಿಸುವ ಬಹು ದಿನದ ಆಸೆ ಇತ್ತು. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಆಗಿದೆ. ತಾಂತ್ರಿಕ ಸಲಹಾ ಸಮಿತಿ ತಜ್ಞರ ಸೂಚನೆಯಂತೆ ಇದೀಗ ಶಾಲೆ ಆರಂಭಿಸಲಾಗುತ್ತದೆ. ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿ ಶಾಲೆಗಳನ್ನು ಪ್ರಾರಂಭ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ರಾಜ್ಯದಲ್ಲಿ 1 ರಿಂದ 5ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಸಚಿವ ನಾಗೇಶ್​ ಇಂದು ನಗರದ ಸರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಶಾಲೆ ಆರಂಭಕ್ಕೂ ಮೊದಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಕ್ಕಳಿಗೆ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕು. ಹೀಗಾಗಿ ಮೊದಲ ಒಂದು ವಾರ ಅರ್ಧ ದಿನ ಮಾತ್ರ ಶಾಲೆ ನಡೆಸಲಾಗುವುದು. ನಂತರ ಪೂರ್ಣಪ್ರಮಾಣದ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು

    ಇದನ್ನೂ ಓದಿ: ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು; ಮಾರ್ಗಸೂಚಿಗಳು ಇಲ್ಲಿವೆ

    ಶಾಲೆಯ ಕೊಠಡಿ, ಮಕ್ಕಳ ಸಂಖ್ಯೆ ಅವಲಂಬಿಸಿ ಶೇಕಡ 50 ರಷ್ಟು ಮಕ್ಕಳ ಹಾಜರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸದ್ಯದ ಮಟ್ಟಿಗೆ 1 ರಿಂದ 5 ನೇ ತರಗತಿ ಮಕ್ಕಳಿಗೆ ಶನಿವಾರ, ಭಾನುವಾರ ಶಾಲೆ ಇರೋದಿಲ್ಲ ಎಂದರು.

    ಮಗುವಿಗೆ ಕರೊನಾ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಹೊರ ಹೋದಾಗ ಮತ್ತು ಕುಟುಂಬದಿಂದ ಮಗುವಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಯಾವುದೇ ಮಕ್ಕಳಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ ಎಂದರು.

    ಸದ್ಯಕ್ಕಿಲ್ಲ ಪ್ರೀಸ್ಕೂಲ್: ರಾಜ್ಯದಲ್ಲಿ 276 ಪೂರ್ವ ಪ್ರಾಥಮಿಕ ಶಾಲೆಗಳಿವೆ. ಇವುಗಳ ಆರಂಭದ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಎಲ್.ಕೆ.ಜಿ., ಯುಕೆಜಿ ತರಗತಿ ನಡೆಸುವ ಚರ್ಚೆ ನಡೆದಿಲ್ಲ ಎಂದು ಸಚಿವ ನಾಗೇಶ್​ ಸ್ಪಷ್ಟಪಡಿಸಿದರು.

    VIDEO| ಅಯ್ಯಪ್ಪಾ! ನೋಡನೋಡುತ್ತಲೇ ನೀರುಪಾಲಾದ ಮನೆ!

    ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts