More

    ಶಿಕ್ಷಣಕ್ಕೆ ಮೊದಲ ಆದ್ಯತೆ ಅಗತ್ಯ

    ಅಥಣಿ: ರೋಟರಿ ಕ್ಲಬ್ ಮತ್ತು ಬೆಂಗಳೂರಿನ ಯುರೋಫಿನ್ ಐಟಿ ಕಂಪನಿ ವತಿಯಿಂದ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಗ್ರೀನ್ ಬೋರ್ಡ್‌ಗಳ ಪ್ರಮಾಣಪತ್ರ ಹಸ್ತಾಂತರ ಕಾರ್ಯಕ್ರಮ ಇಲ್ಲಿಯ ಗುಜರಾತಿ ಭವನದಲ್ಲಿ ಭಾನುವಾರ ಜರುಗಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಂಪನಿ ನಿರ್ದೇಶಕ ಹರೀಶ ರವಿ, ನಾವು ಮೊದಲು ನಮ್ಮ ಕಂಪನಿಯ ಸಿಎಸ್‌ಆರ್ ನಿಧಿಯನ್ನು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇವು. ಅದಾದ ನಂತರ ಸ್ವಯಂ ನಾವೇ ಎಲ್ಲಿ ಅವಶ್ಯಕತೆ ಇದೆಯೋ ಅದನ್ನು ಪರೀಶಿಲಿಸಿ ನಿಧಿ ಸಮರ್ಪಣೆ ಮಾಡುತ್ತಿದ್ದೇವೆ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮೊದಲು ಕೇರಳ ರಾಜ್ಯದಲ್ಲಿ ಸರ್ಕಾರಿ ಶಾಲೆಯ ಕೋಣೆ ನಿರ್ಮಾಣಕ್ಕೆ ನಿಧಿ ನೀಡಿದೇವು. ಅದರ ನಂತರ ಅಥಣಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಗ್ರೀನ್ ಬೋರ್ಡ್ ನೀಡಿದ್ದೇವೆ. ಇದು ನಮಗೆ ಹೆಚ್ಚಿನ ಸಂತೋಷ ತಂದಿದೆ ಎಂದರು.

    ಕಂಪನಿ ನಿರ್ದೇಶಕ ಲೋಕೇಶ ಶಂಕರಪ್ಪ ಮಾತನಾಡಿ, ನಮ್ಮ ಗ್ಲೋಬಲ್ ಕಂಪನಿ 33 ದೇಶಗಳಲ್ಲಿದೆ. ಅದರಲ್ಲಿ ಸುಮಾರು 50 ಸಾವಿರ ಉದ್ಯೋಗಿಗಳಿದ್ದಾರೆ. ಅವರೆಲ್ಲರ ಆಶಯದಂತೆ ಈ ನಿಧಿಯನ್ನು ಶಿಕ್ಷಣಕ್ಕೆ ನೀಡುತ್ತಿದ್ದೇವೆ ಎಂದರು. ರೋಟರಿ ಸದಸ್ಯ ಅರುಣ ಯಲಗುದ್ರಿ ಮಾತನಾಡಿ, ಅಥಣಿ ರೋಟರಿ ಕ್ಲಬ್ 22 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ. ವಿಶ್ವದ 216 ದೇಶಗಳಲ್ಲಿ 33 ಸಾವಿರ ಕ್ಲಬ್ ಜತೆಗೆ 15 ಲಕ್ಷ ಸದಸ್ಯರನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದು ಸ್ಮರಣೀಯ. ಅದರಂತೆ ತಾಲೂಕಿನ 39 ಗ್ರಾಮಗಳ ಸರ್ಕಾರಿ ಶಾಲೆಗಳಿಗೆ 165 ಗ್ರೀನ್ ಬೋರ್ಡ್‌ಗಳನ್ನು ನೀಡಿರುವ ಯುರೋಫಿನ್ ಕಂಪನಿಯ ಸೇವೆ ಮಹತ್ವದಾಗಿದೆ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಅಧ್ಯಕ್ಷ ಮೇಘರಾಜ ಪರಮಾರ ಮಾತನಾಡಿ, ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿ ಈ ಭಾಗದ ಪ್ರವಾಹ ಪೀಡಿತ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಇನ್ನೂ ಹೆಚ್ಚಿನ ನೆರವು ನೀಡುವ ಜತೆಗೆ ಮೂಲ ಸೌಕರ್ಯ ಒದಗಿಸಲು ಯುರೋಫಿನ್ ಕಂಪನಿಯವರು ನಮಗೆ ಸದಾ ಸಹಕಾರ ನೀಡಲಿದ್ದಾರೆ. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದರು.

    ಯುರೋಫಿನ್ ಕಂಪನಿ ನಿರ್ದೇಶಕರಾದ ಮಹೇಶ ಆಲೂರ, ಲೋಕೇಶ ಶಂಕರಪ್ಪ, ಅಭಿಯಂತ ಬಿ.ಆರ್.ಗುರುಪ್ರಸಾದ, ಸುಧೀರಕುಮಾರ ಆಟ್ಲಾ, ಪವನ ಪಾಟೀಲ, ರೋಟರಿ ಸದಸ್ಯರಾದ ಅರುಣ ಯಲಗುದ್ರಿ, ಭರತ ಸೋಮಯ್ಯ, ಶ್ರೀಕಾಂತ ಅಥಣಿ, ಸುರೇಶ ಬಳೋಳ್ಳಿ, ಸಂತೋಷ ಬೊಮ್ಮಣವರ, ಸಚಿನ ದೇಸಾಯಿ, ಶೇಖರ ಕೋಲಾರ, ಅಮೃತ ಮಹಾಜನ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts